ರಾಷ್ಟ್ರಮಟ್ಟದ ಬಾಕ್ಸಿಂಗ್ ಸ್ಪರ್ಧೆಗೆ ಕೊಡಗಿನ ಇಬ್ಬರು ಬಾಕ್ಸರ್ಗಳು ಆಯ್ಕೆ
admincoorgdaily

ಪೊನ್ನಂಪೇಟೆ, 13: ರಾಜ್ಯಮಟ್ಟದ ಎಸ್ಜಿಎಫ್ಐ (SGFI) ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿರುವ ಕರ್ನಾಟಕದ ಕುಮಾರ್ ನಿರನ್ ಹಾಗೂ ಕುಮಾರ್ ಮನೀಶ್ ಅವರು ಅಕ್ಟೋಬರ್ 16ರಂದು ನವದೆಹಲಿಯ ನೋಯ್ಡಾದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಎಸ್ಜಿಎಫ್ಐ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಇಬ್ಬರು ಯುವ ಬಾಕ್ಸರ್ಗಳಿಗೆ ಕೊಡಗು ಬಾಕ್ಸಿಂಗ್ ಅಸೋಸಿಯೇಷನ್ ಶುಭ ಹಾರೈಸಿದೆ.
ಮಾಜಿ ರಾಷ್ಟ್ರೀಯ ಬಾಕ್ಸಿಂಗ್ ಕೋಚ್ ಹಾಗೂ ಎಂಇಜಿ ಖ್ಯಾತಿಯ ದೇಯಂಡ ಡಿಕ್ಕ ಮತ್ತು ಬಾಕ್ಸಿಂಗ್ ತರಬೇತುದಾರ ಶರತ್ ಅವರ ಮಾರ್ಗದರ್ಶನದಲ್ಲಿ ನಿರನ್ ಹಾಗೂ ಮನೀಶ್ ತರಬೇತಿ ಪಡೆದಿದ್ದಾರೆ. ಗೋಣಿಕೊಪ್ಪಲಿನ ಲಿಟಲ್ ಫ್ಲವರ್ ಶಾಲೆಯ ಒಳಾಂಗಣ ಕ್ರೀಡಾಂಗಣದಲ್ಲಿ ಸ್ಥಾಪಿಸಲಾಗಿರುವ ಬಾಕ್ಸಿಂಗ್ ರಿಂಗ್ನಲ್ಲಿ ಇವರಿಗೆ ತರಬೇತಿ ನೀಡಲಾಗಿದೆ.
ರಾಜ್ಯಮಟ್ಟದಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿರುವ ಈ ಇಬ್ಬರು ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲೂ ಉತ್ತಮ ಪ್ರದರ್ಶನ ನೀಡಿ ಕೊಡಗು ಹಾಗೂ ಕರ್ನಾಟಕಕ್ಕೆ ಕೀರ್ತಿ ತರಲಿ ಎಂದು ಕೊಡಗು ಬಾಕ್ಸಿಂಗ್ ಅಸೋಸಿಯೇಷನ್ ಹಾರೈಸಿದೆ.