ಎಮ್ಮೆಮಾಡು ಯುಎಇ ಅನಿವಾಸಿ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ; ಅಧ್ಯಕ್ಷರಾಗಿ ಶಫೀಕ್ ಹಿಶಾಮಿ ನೇಮಕ
admincoorgdaily

ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು:ಯುಎಇಯಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಎಮ್ಮೆಮಾಡು ಯುಎಇ ಅನಿವಾಸಿ ಒಕ್ಕೂಟದ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ದುಬೈನಲ್ಲಿರುವ ಬನಿಯಾಸ್ ಲ್ಯಾಂಡ್‌ಮಾರ್ಕ್ ಹೋಟೆಲ್ ಸಭಾಂಗಣದಲ್ಲಿ ಅಧ್ಯಕ್ಷರಾದ ಜುಬೈರ್ ಕೂರುಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಕಳೆದ ಸಾಲಿನ ಕಾರ್ಯಚಟುವಟಿಕೆಗಳ ವರದಿಯನ್ನು ಪ್ರಧಾನ ಕಾರ್ಯದರ್ಶಿ ಹಂಝ ಬಾರಾಕೊಲ್ಲಿ ಅವರು ಮಂಡಿಸಿದರು. ಬಳಿಕ 2026–27ನೇ ಸಾಲಿಗೆ ನೂತನ ಸಮಿತಿಯನ್ನು ನೇಮಕ ಮಾಡಲಾಯಿತು.
ನೂತನ
ಅಧ್ಯಕ್ಷರಾಗಿ ಶಫೀಕ್ ಹಿಶಾಮಿ,ಕಾರ್ಯಾಧ್ಯಕ್ಷರಾಗಿ ಹಂಝ ಸಿ.ಎಚ್.,ಉಸ್ಮಾನ್ ಬಾರಾಕೊಲ್ಲಿ,ಪ್ರಧಾನ ಕಾರ್ಯದರ್ಶಿಯಾಗಿ ಹಾರಿಫ್ ಸಿ.ಎ., ಕೋಶಾಧಿಕಾರಿಯಾಗಿ ಮಾಹಿನ್ ಬಾದುಷ
ಸೇರಿದಂತೆ ಸಲಹಾ ಸಮಿತಿ ಹಾಗೂ ಇತರ ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಾಸಿರ್ ಸಅದಿ ಪ್ರಾರ್ಥನೆ ನೆರವೇರಿಸಿದರು.ಹಂಝ ಬಾರಾಕೊಲ್ಲಿ ಸ್ವಾಗತಿಸಿ, ಹಾರಿಫ್ ಸಿ.ಎ. ವಂದಿಸಿದರು.