ಹೋಟೆಲ್, ಬೇಕರಿಗಳಿಗೆ ಅನಿರೀಕ್ಷಿತ ದಾಳಿ
admincoorgdaily


ಮಡಿಕೇರಿ:-ಕೊಡಗು ಜಿಲ್ಲೆಯಲ್ಲಿ 2026-27ನೇ ಸಾಲಿನಲ್ಲಿ 2026ರ ಸೆಪ್ಟೆಂಬರ್ ಮಾಹೆಯಲ್ಲಿ ಮಡಿಕೇರಿ, ವಿರಾಜಪೇಟೆ, ಗೋಣಿಕೊಪ್ಪ, ಕುಶಾಲನಗರದ ವ್ಯಾಪ್ತಿಯಲ್ಲಿ ಬೇಕರಿ, ಹೋಟೆಲ್‍ಗಳಿಗೆ ಸಾರ್ವಜನಿಕ ದೂರು ಮತ್ತು ಅನಿರೀಕ್ಷಿತ ತಪಾಸಣೆ ನಡೆಸಲಾಗಿದೆ.
ಕುಶಾಲನಗರದಲ್ಲಿ 6 ಹೋಟೆಲ್‍ಗಳಿಗೆ ನೋಟೀಸ್ ನೀಡಲಾಗಿದೆ. ಹಾಗೆಯೇ 12 ಆಹಾರ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ.
ಗೋಣಿಕೊಪ್ಪ ಮತ್ತು ವಿರಾಜಪೇಟೆಯಲ್ಲಿ 7 ಬೇಕರಿ ಮತ್ತು ಹೋಟೆಲ್‍ಗಳಿಗೆ ಭೇಟಿ ನೀಡಿ ನೋಟೀಸ್ ನೀಡಲಾಗಿದೆ. 20 ಆಹಾರ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇದರಲ್ಲಿ ಕೇರಳ ಮೂಲದ 6 ಆಹಾರ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ.
ಮಡಿಕೇರಿ ವ್ಯಾಪ್ತಿಯಲ್ಲಿ ಸಾರ್ವಜನಿಕ ದೂರು ಆಧಾರದ ಮೇಲೆ 3 ಹೋಟೆಲ್‍ಗಳಿಗೆ ಭೇಟಿ ನೀಡಿ ನೋಟೀಸ್ ನೀಡಲಾಗಿದೆ. ಹಾಗೆಯೇ ಸ್ವಚ್ಛತೆಯನ್ನು ಪಾಲಿಸುವಂತೆ ಸೂಚಿಸಲಾಗಿದೆ.
ಈ ಎಲ್ಲಾ ಹೋಟೆಲ್ ಮತ್ತು ಬೇಕರಿಗಳಿಗೆ ಸ್ವಚ್ಛತೆಯನ್ನು ಪಾಲಿಸುವಂತೆ, ಶುದ್ದ ನೀರು ಪೂರೈಸುವಂತೆ, ಆಹಾರ ತಯಾರು ಮಾಡುವವರ ವೈದ್ಯಕೀಯ ಪರೀಕ್ಷೆ ಮಾಡಿಸುವಂತೆ ಹಾಗೂ ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣಗಳನ್ನು ಬಳಸದಂತೆ, ಆಹಾರ ಪದಾರ್ಥಗಳ ಮೇಲೆ ಸೂಕ್ತ ಲೇಬಲಿಂಗ್ ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಅಂಕಿತ ಅಧಿಕಾರಿ ಡಾ.ಅನಿಲ್ ಧಾವನ್ ಇ. ಅವರು ತಿಳಿಸಿದ್ದಾರೆ.