Kodagu

ಅಕ್ರಮ ಶೆಡ್‌ನಿಂದ ನೆಮ್ಮಲೆ ಗ್ರಾಮದಲ್ಲಿ ಅಶಾಂತಿ - ತೆರವಿಗೆ ಆಗ್ರಹ

admincoorgdaily

ಅಕ್ರಮ ಶೆಡ್‌ನಿಂದ ನೆಮ್ಮಲೆ ಗ್ರಾಮದಲ್ಲಿ ಅಶಾಂತಿ - ತೆರವಿಗೆ ಆಗ್ರಹ
ಮಡಿಕೇರಿ: ಸರ್ಕಾರಿ ಜಾಗದಲ್ಲಿ ಪರವಾನಗಿ ಇಲ್ಲದೆ ನಿರ್ಮಿಸಿರುವ ಶೆಡ್ ಗ್ರಾಮದ ನೆಮ್ಮದಿ ಕೆಡಿಸಿದೆ ಎಂದು ನೆಮ್ಮಲೆ ಗ್ರಾಮಸ್ಥರು ಆರೋಪಿಸಿದ್ದಾರೆ.

ಪೊನ್ನಂಪೇಟೆ ತಾಲೂಕು, ನೆಮ್ಮಲೆ ಗ್ರಾಮದ ಕೆಕೆಆರ್ ತೆರಾಲು ರಸ್ತೆ ಬಳಿ ನಿರ್ಮಿಸಿರುವ ಈ ಶೆಡ್‌ನಲ್ಲಿ ಗುಂಪು ಸೇರಿ ಮದ್ಯಪಾನ, ಗದ್ದಲ, ಮೋಜುಮಸ್ತಿ ನಡೆಯುತ್ತಿದ್ದು, ಮಹಿಳೆಯರು, ಕಾರ್ಮಿಕರಿಗೆ ತೊಂದರೆಯಾಗಿದೆ. ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಪೊಲೀಸರು ನೋಟಿಸ್ ನೀಡಿದ್ದರೂ ಮತ್ತೆ ಅಕ್ರಮವಾಗಿ ತೆರೆಯಲಾಗಿದೆ. ಪ್ರಶ್ನಿಸಲು ಹೋದ ಗ್ರಾಮಸ್ಥರನ್ನು ಕಂಡು ಯುವಕರು ಓಡಿ ಹೋಗಿದ್ದಾರೆ. ಅಶಾಂತಿ ಹರಡುತ್ತಿರುವ ಈ ಶೆಡ್ ತೆರವುಗೊಳಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಗ್ರಾಮ ಸಮಿತಿ ಸದಸ್ಯ ಚೆಟ್ಟಂಗಡ ರಂಜು ಕರುಂಬಯ್ಯ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ನೆಮ್ಮಲೆ ಗ್ರಾಮ ಸಮಿತಿ ಅಧ್ಯಕ್ಷ ಕೆ.ಕೃಷ್ಣ, ಕಾರ್ಯದರ್ಶಿ ಎಂ.ಉಮೇಶ್, ಗ್ರಾಮಸ್ಥರಾದ ಸಿ.ಸಿ.ಕಾರ್ಯಪ್ಪ, ಸಿ.ಡಾಲಿ, ಎಂ.ವಿಜಯ್ ನಂಜಪ್ಪ ಉಪಸ್ಥಿತರಿದ್ದರು.