Kodagu

ಕುಶಾಲನಗರದಲ್ಲಿ 'ಸಾಮರಸ್ಯ ವೇದಿಕೆ'ಯಿಂದ ವಾಲ್ಮೀಕಿ ಜಯಂತಿ ಆಚರಣೆ

admincoorgdaily

ಕುಶಾಲನಗರದಲ್ಲಿ 'ಸಾಮರಸ್ಯ ವೇದಿಕೆ'ಯಿಂದ ವಾಲ್ಮೀಕಿ ಜಯಂತಿ ಆಚರಣೆ
ಕುಶಾಲನಗರ: ಕುಶಾಲನಗರದ ಸಾಮರಸ್ಯ ವೇದಿಕೆಯಿಂದ ನಗರದ ಮಹಾಲಕ್ಷ್ಮಿ ರೆಸಿಡೆನ್ಸಿ ಸಭಾಂಗಣದಲ್ಲಿ ವಾಲ್ಮೀಕಿ ಜಯಂತಿಯನ್ನು ಶುಕ್ರವಾರ ಸಂಜೆ ಆಚರಿಸಲಾಯಿತು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಲ್ಮೀಕಿ ಸಮಾಜದ ಬಸವನಹಳ್ಳಿ ರವಿ ವಹಿಸಿದ್ದರು. 
ಮುಖ್ಯ ಅತಿಥಿಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕು ಸಂಘ ಚಾಲಕರಾದ ಡಾ.ಉದಯ್ ಕುಮಾರ್ ಮಾತನಾಡಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಲಭ್ಯ ಇರುವ ಆರೋಗ್ಯ ಕಾರ್ಡಿನ ಸೂಕ್ತ ಉಪಯೋಗದ ಬಗ್ಗೆ ಮಾಹಿತಿ ನೀಡಿದರು .

ಕಾರ್ಯಕ್ರಮದ ಮುಖ್ಯ ವಕ್ತಾರರಾದ 'ಸರಸ್ವತಿ ಡಿ . ಎಡ್. ಕಾಲೇಜು' ಪ್ರಾಂಶುಪಾಲ 
ಕುಮಾರ್ ಮಾತನಾಡಿ  ಸಮಾಜವನ್ನು ಸಕಾರಾತ್ಮಕವಾಗಿ ಪರಿವರ್ತನೆ ಮಾಡುವಲ್ಲಿ ಮಹರ್ಷಿ ವಾಲ್ಮೀಕಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಮನಲ್ಲಿರುವ ಎಲ್ಲಾ ಗುಣಗಳು ಜಗತ್ತು ಆರಾಧಿಸುತ್ತದೆ, ಇದಕ್ಕೆ ಮಹರ್ಷಿ ವಾಲ್ಮೀಕಿ ರಾಮನಿಗೆ ರಾಮಾಯಣದಲ್ಲಿ ನೀಡಿರುವ ಪ್ರಾಶಸ್ತ್ಯ ಕಾರಣ ಎಂದರು. ಇಂದಿನ ಸಮಾಜ ರಾಮಾಯಣವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಅಗತ್ಯ ಇದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಾಮರಸ್ಯ ವೇದಿಕೆ ಸಂಯೋಜಕ ಹರೀಶ್ ತಮ್ಮಯ್ಯ 
ಜಿಲ್ಲೆಯಲ್ಲಿ 'ಸಾಮರಸ್ಯ ವೇದಿಕೆಯ ಚಟುವಟಿಕೆಗಳ ಮಾಹಿತಿಯನ್ನು ನೀಡಿದರು.
 
ಸಾಮರಸ್ಯ ವೇದಿಕೆಯ ಜಿಲ್ಲಾ ಸಹ ಸಂಯೋಜಕ ದೇವಿ ಪ್ರಸಾದ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ದರ್ಶನ್  ಸಾಮರಸ್ಯ ಗೀತೆ ಹಾಡಿದರೆ ರಜನಿಕಾಂತ್ ಎಂ.ಜೆ ಗಣ್ಯರನ್ನು ಸಭೆಗೆ ಪರಿಚಯಿಸಿ ಸಭಿಕರನ್ನು ಸ್ವಾಗತಿಸಿದರು.
ಮಹೇಶ್ ಅಮೀನ್ ವಂದೇ ಮಾತರಂ ಗೀತೆ ಹಾಡಿದರೆ ಕೊನೆಯಲ್ಲಿ ಜಿಲ್ಲಾ ಸಹ ಸಂಯೋಜಕಿ ಲೀಲಾ ಮೇದಪ್ಪ ವಂದನಾರ್ಪಣೆ ಮಾಡಿದರು.
 
ಸಾಮರಸ್ಯ ವೇದಿಕೆಯ ತಾಲೂಕು ಸಂಯೋಜಕರಾದ ರವಿ, ಸದಾಶಿವ, ತಾಲೂಕಿನ ವಿವಿಧ ಸಂಘಟನೆಗಳ ಮುಖಂಡರು, ಸಮುದಾಯದ ಪ್ರಮುಖರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

ವರದಿ: ಶ್ರೀಧರ್ ನಾರಾಯಣ್