Kodagu

ನ.21 ರಿಂದ ಓಂಕಾರೇಶ್ವರ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮ

admincoorgdaily

ನ.21 ರಿಂದ ಓಂಕಾರೇಶ್ವರ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮ
ಮಡಿಕೇರಿ:-ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ರೂಢಿ ಸಂಪ್ರದಾಯದಂತೆ ನವೆಂಬರ್, 21 ರಿಂದ 26 ರ ವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಾಲಯ ವ್ಯವಸ್ಥಾಪನಾ ಸಮಿತಿ ಇಒ ದೇವರಾಜು ಅವರು ತಿಳಿಸಿದ್ದಾರೆ. 

ನವೆಂಬರ್ 21 ರಂದು ಸಂಜೆ 6.30 ಗಂಟೆಗೆ ಉತ್ಥಾನ ದ್ವಾದಶಿ ಪ್ರಯುಕ್ತ ತುಳಸಿ ಪೂಜೆ ನಡೆಯಲಿದೆ. ನವೆಂಬರ್, 24 ರಂದು ಸಂಜೆ 6.30 ಗಂಟೆಯಿಂದ ತೆಪ್ಪೋತ್ಸವ, ಪಲ್ಲಕಿ ಉತ್ಸವ, ದಟ್ಟೋತ್ಸವ ಪೂಜಾ ಕಾರ್ಯಕ್ರಮ ನಡೆಯಲಿದೆ. ಸೇವಾಕರ್ತರು ತಮ್ಮ ಹೆಸರನ್ನು ದೇವಾಲಯದಲ್ಲಿ ನೋಂದಾಯಿಸುವ ಮೂಲಕ ಸೇವೆಯನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. 

ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ನವೆಂಬರ್, 25 ರಂದು ರಾತ್ರಿ 07.30 ಗಂಟೆಗೆ ಹುತ್ತರಿ ಹಬ್ಬದ ಪ್ರಯುಕ್ತ ಕದಿರು ತೆಗೆಯುವ ಹಾಗೂ ಇತರೆ ಸಾಂಪ್ರದಾಯಿಕ ಆಚರಣೆ ಇರುತ್ತದೆ. ಮಹಾ ಪೂಜೆಯ ನಂತರ ಪ್ರಸಾದ ಮತ್ತು ಕದಿರು ವಿತರಿಸಲಾಗುತ್ತದೆ.  

ನವೆಂಬರ್, 26 ರಂದು ಮಧ್ಯಾಹ್ನ 3 ಗಂಟೆಗೆ ನಗರದ ಕೋಟೆ ಆವರಣದಲ್ಲಿ ಹುತ್ತರಿ ಹಬ್ಬದ ಪ್ರಯುಕ್ತ ಶ್ರೀ ಓಂಕಾರೇಶ್ವರ ದೇವಾಲಯದ ವತಿಯಿಂದ ಪಾಂಡೀರ ಕುಟುಂಬದವರಿಂದ ಹುತ್ತರಿ ಕೋಲಾಟ ಕಾರ್ಯಕ್ರಮ ನಡೆಯಲಿದೆ. 

ಸಾರ್ವಜನಿಕ ಭಕ್ತಾದಿಗಳು ದೇವಾಲಯದಲ್ಲಿ ಜರುಗುವ ಪೂಜೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಎ.ಸಿ.ದೇವಯ್ಯ, ಅಧ್ಯಕ್ಷರು ದೂ.ಸಂ.9448899567 ಅಥವಾ ಕಾರ್ಯನಿರ್ವಹಣಾ ಅಧಿಕಾರಿ ಪಿ.ಎಲ್.ದೇವರಾಜ್ 9448798558 ನ್ನು ಸಂಪರ್ಕಿಸಬಹುದು ಎಂದು ಶ್ರೀಓಂಕಾರೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ದೇವರಾಜು ಅವರು ತಿಳಿಸಿದ್ದಾರೆ.