ವಿರಾಜಪೇಟೆಯಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆ ವಾಹನ ಸಂಚಾರ ನಿರ್ಬಂಧ: ಜಿಲ್ಲಾಧಿಕಾರಿ ಆದೇಶ
admincoorgdaily

ವಿರಾಜಪೇಟೆ: ವಿರಾಜಪೇಟೆ ನಗರದಲ್ಲಿ ದಿನಾಂಕ 25-09-2026ರ ಮಧ್ಯಾಹ್ನ 02:00 ಗಂಟೆಯಿಂದ 26-09-2026ರ ಪೂರ್ವಾಹ್ನ 10:00 ಗಂಟೆಯವರೆಗೆ ಗಣಪತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಕೊಡಗು ಜಿಲ್ಲಾಧಿಕಾರಿ ಸೋಮಶೇಖರ್ ಎಸ್.ಜೆ ಅವರು ಆದೇಶ ಹೊರಡಿಸಿದ್ದಾರೆ.
ವಿರಾಜಪೇಟೆಯಲ್ಲಿ 22 ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ:
ವಿರಾಜಪೇಟೆ ನಗರದಲ್ಲಿ ಪ್ರತಿಷ್ಠಾಪಿಸಲಾಗಿರುವ ಒಟ್ಟು 22 ಗಣೇಶ ಮೂರ್ತಿಗಳನ್ನು ಸಾಮೂಹಿಕವಾಗಿ ವಿಸರ್ಜನೆ ಮಾಡಲಾಗುತ್ತಿದೆ. ಈ ಮೆರವಣಿಗೆಯು ವಿರಾಜಪೇಟೆ ನಗರದ ಪುರಭವನ,ಮಡಿಕೇರಿ ರಸ್ತೆ, ತಾಲ್ಲೂಕು ಕಚೇರಿ ಮೂಲಕ ಹಾದು ವಿರಾಜಪೇಟೆ ಕೆರೆಗೆ ತೆರಳಲಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 20,000-25,000 ಜನರು ಸೇರುವ ನಿರೀಕ್ಷೆ ಇದ್ದು, ಸಾರ್ವಜನಿಕ ಸುವ್ಯವಸ್ಥೆ ಮತ್ತು ವಾಹನ ಸಂಚಾರ ದಟ್ಟಣೆ ನಿಯಂತ್ರಿಸಲು ಈ ಆದೇಶ ನೀಡಿದ್ದಾರೆ.
ವಾಹನ ಸಂಚಾರ ನಿರ್ಬಂಧದ ಪ್ರಮುಖ ಮಾರ್ಗಗಳು:
1. ಪೆರಂಬಾಡಿ ಕಡೆಯಿಂದ ವಿರಾಜಪೇಟೆ ನಗರಕ್ಕೆ ಉತ್ಸವ ವೀಕ್ಷಣೆಗೆ ಬರುವ ವಾಹನಗಳನ್ನು ಕೀರ್ತಿ ರೆಸ್ಟೋರೆಂಟ್ ಮುಂಭಾಗದಿಂದ ಆರ್ಜಿ ಕಡೆಗೆ ಹೋಗುವ ರಸ್ತೆಯ ಎಡಭಾಗದ ಬದಿಯಲ್ಲಿ ಮಾತ್ರ ನಿಲ್ಲಿಸುವುದು.
2. ಕೇರಳದ ಕಡೆಯಿಂದ ಗೋಣಿಕೊಪ್ಪದ ಕಡೆ ಅಥವಾ ಸಿದ್ದಾಪುರದ ಕಡೆಗೆ ಹೋಗುವ ವಾಹನಗಳಿಗೆ ಪೆರುಂಬಾಡಿ ಚೆಕ್ ಪೋಸ್ಟ್, ಬಾಳುಗೋಡು, ಬಿಟ್ಟಂಗಾಲ ಜಂಕ್ಷನ್, ಕೈಕೇರಿ ಜಂಕ್ಷನ್, ಗದ್ದೆ ಮನೆಯ ರಸ್ತೆ ಜಂಕ್ಷನ್ ಮಾರ್ಗವಾಗಿ ಪಾಲಿಬೆಟ್ಟ ಸಿದ್ದಾಪುರಕ್ಕೆ ಹೋಗುವುದು.
3. ಸಿದ್ದಾಪುರ ಕಡೆಯಿಂದ ಕೇರಳದ ಕಡೆ ಹೋಗುವ ವಾಹನಗಳಿಗೆ ಕೈಕೇರಿ, ಬಿಟ್ಟಂಗಾಲ, ಬಾಳುಗೋಡು, ಪೆರುಂಬಾಡಿ ಮಾರ್ಗ.
4. ಮಡಿಕೇರಿಯಿಂದ ಕೇರಳದ ಕಡೆಗೆ ಹೋಗುವ ವಾಹನಗಳಿಗೆ ಮೂರ್ನಾಡು, ಕೊಂಡಂಗೇರಿ, ಅಮ್ಮತ್ತಿ, ಪಾಲಿಬೆಟ್ಟ,ಕೈಕೇರಿ,ಬಿಟ್ಟಂಗಾಲ,ಬಾಳುಗೋಡು,ಪೆರುಂಬಾಡಿ ಮಾಕುಟ್ಟ.
5. ಕೇರಳದ ಕಡೆಯಿಂದ ಮಡಿಕೇರಿಗೆ ಹೋಗುವ ವಾಹನಗಳು ಪೆರುಂಬಾಡಿ, ಬಿಟ್ಟಂಗಾಲ ಮಾರ್ಗವಾಗಿ ಕೈಕೇರಿ ಪಾಲಿಬೆಟ್ಟ ಮೂರ್ನಾಡು ಮಾರ್ಗವಾಗಿ ಮಡಿಕೇರಿ.
6. ಮಡಿಕೇರಿ ಕಡೆಯಿಂದ ಗೋಣಿಕೊಪ್ಪ, ಮುಖಾಂತರ ಮೈಸೂರು, ಬೆಂಗಳೂರಿಗೆ ಹೋಗುವ ವಾಹನಗಳು ಮೂರ್ನಾಡು, ಕೊಂಡಂಗೇರ, ಅಮ್ಮತ್ತಿ, ಪಾಲಿಬೆಟ್ಟ, ಕೆಕೇರಿ-ಗೋಣಿಕೊಪ್ಪ ಮಾರ್ಗ.
7. ಸಿದ್ದಾಪುರ ಕಡೆಯಿಂದ ಮಡಿಕೇರಿಗೆ ಬರುವ ವಾಹನಗಳು ಮಗ್ಗುಲ ಜಂಕ್ಷನ್ (ಡಂಟಲ್ ಕಾಲೇಜು ಜಂಕ್ಷನ್) ಮತ್ತು ರವಿರಾಜ್ ಗ್ಯಾಸ್ ಏಜೆನ್ಸಿ ಕಛೇರಿಯಿಂದ ಐಮಂಗಳ ಕಡೆಗೆ ಹೋಗುವ ರಸ್ತೆಯ ಎಡಬದಿಯಲ್ಲಿ ನಿಲ್ಲಿಸಬೇಕು.
8. ಗೋಣಿಕೊಪ್ಪ ಕಡೆಯಿಂದ ಮೆರವಣಿಗೆ ನೋಡಲು ಬರುವ ವಾಹನಗಳನ್ನು ಪಂಜರುಪೇಟೆಯ ಸರ್ವೋದಯ ಕಾಲೇಜಿನ ಬಳಿಯಿಂದ ಕಾವೇರಿ ಕಾಲೇಜು ಕಡೆಗೆ ಎಡಬದಿಯಲ್ಲಿ ನಿಲ್ಲಿಸತಕ್ಕದ್ದು.
9. ಬೇಟೋಳಿ, ಗುಂಡಿಗೆರೆ, ಬಿಟ್ಟಂಗಾಲ ಕಡೆಯಿಂದ ಮಹಿಳಾ ಸಮಾಜ ಮಾರ್ಗವಾಗಿ ಮೆರವಣಿಗೆ ನೋಡಲು ಬರುವ ವಾಹನಗಳು ಮಹಿಳಾ ಸಮಾಜ ರಸ್ತೆಯ ಎಡಬದಿಯಲ್ಲಿ ನಿಲ್ಲಿಸತಕ್ಕದ್ದು.
10. ಮೈಸೂರು, ಬೆಂಗಳೂರು ಕಡೆಯಿಂದ ಮಡಿಕೇರಿಗೆ ಹೋಗುವ ವಾಹನಗಳು ಗೋಣಿಕೊಪ್ಪ, ಸಿದ್ದಾಪುರ ಮಾರ್ಗವಾಗಿ ಮಡಿಕೇರಿಗೆ ಹೋಗುವುದು.
11. ಒಂಟಿಯಂಗಡಿ, ಚೆಂಬೆಳ್ಳೂರು ಮಾರ್ಗವಾಗಿ ವಿರಾಜಪೇಟೆ ನಗರಕ್ಕೆ ಗಣೇಶ ವಿಸರ್ಜನೆ ಮೆರವಣಿಗೆ ನೋಡಲು ಬರುವ ವಾಹನಗಳು ಕೊಡಗು ಸಮಾಜ ಜಂಕ್ಷನ್ ನಿಂದ ಚೆಂಬೆಬೆಳ್ಳೂರುಗೆ ಹೋಗುವ ರಸ್ತೆಯ ಎಡಭಾಗದಲ್ಲಿ ನಿಲ್ಲಿಸತಕ್ಕದ್ದು.
12. ಮಡಿಕೇರಿ ಕಡೆಯಿಂದ ವಿರಾಜಪೇಟೆ ಗಣೇಶ ವಿಸರ್ಜನಾ ಮೆರವಣಿಗೆ ನೋಡಲು ಬರುವ ವಾಹನಗಳು ಕೊಡಗು ಸಮಾಜ ಜಂಕ್ಷನ್ ನಿಂದ ಚೆಂಬೆಬೆಳ್ಳೂರುಗೆ ಹೋಗುವ ರಸ್ತೆಯ ಎಡಭಾಗದಲ್ಲಿ ನಿಲ್ಲಿಸತಕ್ಕದ್ದು.
13. ದಿನಾಂಕ 25-09-2026 ರಂದು ಅಪರಾಹ್ನ 02:00 ಗಂಟೆಯಿಂದ ದಿನಾಂಕ 26-09-2026 ರ 10:00 ಗಂಟೆಯವರೆಗೆ ವಿರಾಜಪೇಟೆ ನಗರದ ತಾಲ್ಲೂಕು ಕಚೇರಿ, ದೊಡ್ಡಟ್ಟಿ ವೃತ್ತ, ಅಪ್ಸರಾ, ಸ್ವಾಮಿ ರಾವ್, ದ್ವಾರಿ ಮುಖ್ಯಸ್ಥ ರಸ್ತೆ, ಅರಸು ನಗರ ರಸ್ತೆ, ಎಫ್.ಎಂ.ಸಿ ರಸ್ತೆ, ಗಡಿಯಾರ ಕಂಬ, ಮಲೆಬಾರ್ ರಸ್ತೆ, ದೊಡ್ಡಟ್ಟಿ ವೃತ್ತದಿಂದ ಪಂಜರುಪೇಟೆ ಸರ್ವೋದಯ ಕಾಲೇಜುವರೆಗೆ ಹಾಗೂ ಮಗ್ಗುಲ ಜಂಕ್ಷನ್ ನಿಂದ ಮೊಹಲ್ಲಾ ಜಂಕ್ಷನ್ ವರೆಗೆ ಯಾವುದೇ ವಾಹನಗಳು ಓಡಾಡದಂತೆ ಮತ್ತು ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಈ ನಿಯಮ ಮೀರಿದರೆ ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989 (ತಿದ್ದುಪಡಿ ನಿಯಮಗಳು 1990) ನಿಯಮ 221ಎ (5) ರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.