Kodagu

ವಿರಾಜಪೇಟೆ; ಅಪ್ಪಯ್ಯಸ್ವಾಮಿ ರಸ್ತೆಯ ಹೊಸ ಬಡಾವಣೆಯಲ್ಲಿ ಹುತ್ತರಿ ಹಬ್ಬದ ಸಡಗರ

admincoorgdaily

ವಿರಾಜಪೇಟೆ; ಅಪ್ಪಯ್ಯಸ್ವಾಮಿ ರಸ್ತೆಯ ಹೊಸ ಬಡಾವಣೆಯಲ್ಲಿ  ಹುತ್ತರಿ ಹಬ್ಬದ ಸಡಗರ
ವಿರಾಜಪೇಟೆ : ಪಟ್ಟಣದ ಅಪ್ಪಯ್ಯಸ್ವಾಮಿ ರಸ್ತೆಯ ಹೊಸ ಬಡಾವಣೆಯಲ್ಲಿ ಬುಧವಾರ ಹುತ್ತರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಹೊಸ ಬಡಾವಣೆಯ ನಿವಾಸಿಗಳೆಲ್ಲ ಸಂಜೆ 6:30ಕ್ಕೆ ಪೊಯ್ಯೆಟ್ಟಿರ ಡಾಲು ನಾಣಯ್ಯ ಅವರ ಮನೆಯ ಆವರಣದಲ್ಲಿ ಜೊತೆ ಸೇರಿ ಹುತ್ತರಿ ಹಬ್ಬದ ವಿಶೇಷವಾದ ತಿನಿಸುಗಳನ್ನು ಒಳಗೊಂಡ ಫಲಹಾರ ಸೇವಿಸಿದರು. ಬಳಿಕ ಧಾರ್ಮಿಕ ವಿಧಿವಿಧಾನಗಳಂತೆ 7ಕ್ಕೆ ನೆರೆ ಕಟ್ಟಲಾಯಿತು.

 ಬಳಿಕ ಬಡಾವಣೆಯ ನಿವಾಸಿಗಳೆಲ್ಲ  ಕದಿರು ತರಲು ಮೂಡೆರ ಪ್ರತಾಪ್ ಅವರ ಮನೆಯ ಸಮೀಪ ಸಾಗಿದರು. ಶ್ರದ್ದಾಭಕ್ತಿಯಿಂದ ಧಾನ್ಯಲಕ್ಷ್ಮಿಗೆ ಪೂಜೆ ಸಲ್ಲಿಸಿ, ಹಾಲುತುಪ್ಪ ಅರ್ಪಿಸಿ ಸಮೃದ್ಧಿಯನ್ನು ಕೂಗಿ ಕರೆಯುತ್ತಾ ಹೊಸ ಕದಿರನ್ನು ತೆಗೆದು ಧಾನ್ಯಲಕ್ಷ್ಮಿಯನ್ನು ಸ್ವಾಗತಿಸುವ ಮೂಲಕ ಈ ಸಾಲಿನ‌ ಕಟಾವಿಗೆ ಚಾಲನೆ ನೀಡಿದರು. 

ಹಾದಿಯುದ್ದಕ್ಕು 'ಪೊಲಿ ಪೊಲಿ ದೇವಾ' ಎಂದು ಸಮೃದ್ಧಿಯನ್ನು ಕರೆಯುತ್ತಾ ಸಂಭ್ರಮದಿಂದ ಹುತ್ತರಿಯನ್ನು ಆಚರಿಸಲಾಯಿತು. ಹಬ್ಬದ ಹಿನ್ನೆಲೆಯಲ್ಲಿ ಸಿಡಿಮದ್ದನ್ನು ಸಿಡಿಸಿ ಹರ್ಷ ವ್ಯಕ್ತಪಡಿಸಲಾಯಿತು.

ಈ ಸಂದರ್ಭ ಹೊಸ ಬಡಾವಣೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸೀತಾರಾಂ ರೈ, ಕಾರ್ಯದರ್ಶಿ ಮೂಡೆರ ಧರಣಿ ಪ್ರತಾಪ್, ನಿರ್ದೇಶಕರಾದ ಐಚಂಡ ಶಾನ್ ಚಂಗಪ್ಪ, ಕುಸುಮಾ ನಾರಾಯಣ್ ಶೆಟ್ಟಿ, ವನಜ ನಾಗರಾಜ್, ಐಚಂಡ ಚೈತ್ರ ದೇಚಮ್ಮ, ಹಿರಿಯರಾದ ಮಾಳೇಟಿರ ರವಿ ನಂಜಪ್ಪ, ಪೊಯ್ಯೆಟ್ಟಿರ ಡಾಲು ನಾಣಯ್ಯ, ರಮೇಶ್ ರೈ, ಎಂ.ಎಸ್. ರವಿ, ಬೊಳ್ಳಂಡ ರಾಜ‌ ತಿಮ್ಮಯ್ಯ, ನಂಬಿಯಪಂಡ ಬೋಜಕ್ಕಿ, ಪುಪ್ಷ ಶಿವರಾಂ ರೈ ಸೇರಿದಂತೆ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.