ವಿರಾಜಪೇಟೆ: ರಾಮನಗರದಲ್ಲಿ ನಿರ್ಮಾಣಗೊಂಡಿರುವ ನೂತನ ಸಮುದಾಯ ಭವನ ಉದ್ಘಾಟನೆ
admincoorgdaily

ವಿರಾಜಪೇಟೆ: ರಾಮನಗರದಲ್ಲಿ ನಿರ್ಮಾಣಗೊಂಡಿರುವ ನೂತನ ಸಮುದಾಯ ಭವನದ ಉದ್ಘಾಟನೆ ಕಾರ್ಯಕ್ರಮವನ್ನು ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯವರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಇಂದು ನೆರವೇರಿಸಿದರು.
ಈ ಹಿಂದೆ ರಾಮನಗರ ನಿವಾಸಿಗಳು ಮಾನ್ಯ ಶಾಸಕರನ್ನು ಭೇಟಿಯಾದ ಸಂದರ್ಭ, ತಮ್ಮ ಭಾಗದಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮವನ್ನು ಮಾಡಲು ಅಗತ್ಯವಿರುವ ಸಮುದಾಯ ಭವನ ಅಥವಾ ಚತ್ರಗಳು ಇಲ್ಲದಿರುವುದನ್ನು ಗಮನಕ್ಕೆ ತಂದಾಗ, ಶಾಸಕರ ವಿಶೇಷ ಕಾಳಜಿಯಿಂದ ಒದಗಿ ಬಂದ ಸರ್ಕಾರದ ಅನುದಾನದ ರೂ35ಲಕ್ಷಗಳಲ್ಲಿ ಈ ಸಮುದಾಯ ಭವನವನ್ನು ನಿರ್ಮಿಸಲಾಯಿತು.
ಸಮುದಾಯ ಭವನವನ್ನು ಲೋಕಾರ್ಪಣೆಗೊಳಿಸಿದ ಬಳಿಕ ಶುಭ ಕೋರಿದ ಮಾನ್ಯ ಶಾಸಕರು, ರಾಜ್ಯ ಸರ್ಕಾರವು ನಾಡಿನ ಅನೇಕ ಸಮುದಾಯಗಳ ಹಿತಚಿಂತನೆಯಿಂದ ಅವರ ಅನುಕೂಲಕ್ಕಾಗಿ ಸಮುದಾಯ ಭವನಗಳನ್ನು ನಿರ್ಮಿಸಿ ಕೊಡುತ್ತಿದೆ. ಇದನ್ನು ಜೋಪಾನವಾಗಿ ಎಲ್ಲರೂ ಸದ್ಬಳಕೆ ಮಾಡಿಕೊಳ್ಳುತ್ತಾ ತಮ್ಮ ಮುಂದಿನ ಪೀಳಿಗೆಗೂ ಇದರ ಅನುಕೂಲ ಒದಗುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬನ ಜವಾಬ್ದಾರಿ ಎಂದು ಹೇಳಿದರು.
ವಿರಾಜಪೇಟೆ ಬ್ಲಾಕ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ ,ವಲಯ ಅಧ್ಯಕ್ಷರಾದ ವರ್ಗಿಸ್, ವಿರಾಜಪೇಟೆ ತಾಲೂಕು ಕೆಡಿಪಿ ಸದಸ್ಯರು ಮಾಳೆಟೀರ ಪ್ರಶಾಂತ್, ಶಶಿ, ವಿರಾಜಪೇಟೆ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಶಬರೀಶ್ ಶೆಟ್ಟಿ, ತಾಲೂಕು ಪ್ರಚಾರ ಸಮಿತಿಯ ಅಧ್ಯಕ್ಷರಾದ ಮತೀನ್, ನಾಪೋಕ್ಲು ಬ್ಲಾಕ್ ಅಧ್ಯಕ್ಷರಾದ ಸೌಕತ್ ಆ ಲೀ, ವಿರಾಜಪೇಟೆವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಕ್ಷಿತ್ ಚಂಗಪ್ಪ, ವಿನಾಯಕ ಯುವಕ ಸಂಘದ ಅಧ್ಯಕ್ಷ ವಸಂತ ಕಟ್ಟಿ ,ಬೇಟೋಳಿ ಗ್ರಾ.ಪಂ ಪಿಡಿಒ. ಮಂಜುಳಾ , ಕೆದಮುಳ್ಳೂರು ಗ್ರಾ.ಪಂ ಪಿಡಿಒ ಮಣಿ ,ಲತಾ ,ರಜಾಕ್ , ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.