ವಿರಾಜಪೇಟೆ; ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ
admincoorgdaily

ವಿರಾಜಪೇಟೆ, : ವ್ಯಕ್ತಿಯೋರ್ವರು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ಗ್ರಾಮಾಂತರ ಪ್ರದೇಶ ತೋರ ಗ್ರಾಮದಲ್ಲಿ ನಡೆದಿದೆ.
ಹೆಗ್ಗಳ ಗ್ರಾಮದ ತೋರ ಗ್ರಾಮದ ನಿವಾಸಿ ದಿವಂಗತ ಕುಡಿಯರ ಭೀಮಯ್ಯ ಅವರ ಪುತ್ರ ಕೆ.ಬಿ. ಸೋಮಯ್ಯ (42) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ವಿಷ ಸೇವನೆ ಬಳಿಕ ಅವರನ್ನು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಗೆ ರವಾನಿಸಲಾಗಿತ್ತು. ಮಡಿಕೇರಿಯಿಂದ ಮೈಸೂರು ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತಾ. 27 ರ ಮುಂಜಾನೆ 2 ಗಂಟೆಯ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಸೋಮಯ್ಯ ಮೃತರಾಗಿದ್ದಾರೆ.
ಮೃತ ಸೋಮಯ್ಯ ಅವರ ಪತ್ನಿ ಶೈಲಾ ನೀಡಿರುವ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.