Kodagu

ವಿರಾಜಪೇಟೆ: ನೂತನ ನ್ಯಾಯಾಲಯ ಕಟ್ಟಡ ಸ್ಥಳಕ್ಕೆ ಸಚಿವ, ಶಾಸಕರ ಭೇಟಿ - ಪರಿಶೀಲನೆ

admincoorgdaily

ವಿರಾಜಪೇಟೆ: ನೂತನ ನ್ಯಾಯಾಲಯ ಕಟ್ಟಡ ಸ್ಥಳಕ್ಕೆ ಸಚಿವ, ಶಾಸಕರ ಭೇಟಿ - ಪರಿಶೀಲನೆ
ವಿರಾಜಪೇಟೆ: ವಿರಾಜಪೇಟೆ ತಾಲೂಕಿನ ಆರ್ಜಿ ಭಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ನ್ಯಾಯಾಲಯ ಕಟ್ಟಡದ ಸ್ಥಳ ವೀಕ್ಷಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ನರೇಂದ್ರಸ್ವಾಮಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಇಂದು ಕೈಗೊಂಡರು.

ಈ ಸಂದರ್ಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ರಾಚಯ್ಯ, ಕೊಡಗು ಜಿಲ್ಲಾ ನ್ಯಾಯಾಧೀಶ ಮಾರುತಿ ಬಾಗಡೆ, ಅಪರ ಜಿಲ್ಲಾ ನ್ಯಾಯಾಧೀಶ ನಟರಾಜ್, ಹಿರಿಯ ಸಿವಿಲ್ ನ್ಯಾಯಾಧೀಶ ಮಂಜುನಾಥ್, ನ್ಯಾಯಾಧೀಶ ವಿಶ್ವನಾಥ್, ಸರ್ಕಾರಿ ವಕೀಲ ನರೇಂದ್ರ ಕಾಮತ್, ಜಿಲ್ಲಾಧಿಕಾರಿ, ವಿರಾಜಪೇಟೆ ವಕೀಲರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.