Kodagu

ವಿರಾಜಪೇಟೆ; ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಬಸವರಾಜ ಹಂಚಿಮನಿ ಕುಟುಂಬಕ್ಕೆ 3 ಲಕ್ಷ ರೂ. ನೆರವು ನೀಡಿದ ಶಾಸಕ ಎ.ಎಸ್.ಪೊನ್ನಣ್ಣ

admincoorgdaily

ವಿರಾಜಪೇಟೆ; ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಬಸವರಾಜ ಹಂಚಿಮನಿ ಕುಟುಂಬಕ್ಕೆ 3 ಲಕ್ಷ ರೂ. ನೆರವು ನೀಡಿದ ಶಾಸಕ ಎ.ಎಸ್.ಪೊನ್ನಣ್ಣ
ವಿರಾಜಪೇಟೆ: ಇತ್ತೀಚೆಗೆ ವಿರಾಜಪೇಟೆ ಗಣೇಶೋತ್ಸವ ಸಂದರ್ಭದಲ್ಲಿ ವಿದ್ಯುತ್ ಅವಘಡದಿಂದ ನಿಧನ ಹೊಂದಿದ ಬಸವರಾಜ ಗಂಗಾಧರ ಹಂಚಿಮನಿ ಅವರ ಕುಟುಂಬಕ್ಕೆ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಅವರು ವೈಯಕ್ತಿಕವಾಗಿ 3 ಲಕ್ಷ ರೂ. ಧನಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಮೃತರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಶಾಸಕರು, ಪರಿಹಾರದ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ರಾಕೇಶ್, ಸಚಿನ್ ಸಾಗರ್, ಚಂದ್ರ, ವಿಠಲ, ಶ್ರೀನಿವಾಸ ಮೂರ್ತಿ, ವರುಣ್, ಮೂರ್ತಿ, ನರೇಂದ್ರ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.