ವಿರಾಜಪೇಟೆ;ಬುದ್ಧಿವಾದ ಹೇಳಿದ ತಾಯಿ: ಮನನೊಂದ 14 ವರ್ಷದ ಬಾಲಕಿ ಆತ್ಮಹತ್ಯೆ
admincoorgdaily

ವಿರಾಜಪೇಟೆ: ಮಗಳ ಭವಿಷ್ಯದ ಬಗ್ಗೆ ಕಾಳಜಿಯಿಂದ ತಾಯಿ ಹೇಳಿದ ಬುದ್ಧಿಮಾತು ದುರಂತದಲ್ಲಿ ಅಂತ್ಯವಾದ ಘಟನೆ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾ.ಪಂ ವ್ಯಾಪ್ತಿಯ ಕೊಟ್ಟೋಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊಟ್ಟೋಳ್ಳಿ ಗ್ರಾಮದ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಕುಟುಂಬದಲ್ಲಿ ತಾಯಿ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಾರೆ. ತಂದೆ 5 ವರ್ಷದ ಹಿಂದೆ ನಿಧನರಾಗಿದ್ದು, ತಾಯಿ ಕೂಲಿ ಕಾರ್ಮಿಕರಾಗಿ ದುಡಿದು ಮಕ್ಕಳನ್ನು ಸಾಕುತ್ತಿದ್ದಾರೆ.
ಶಾಲೆಗೆ ತೆರಳುತ್ತಿದ್ದ 14 ವರ್ಷದ ಬಾಲಕಿ ಅದೇ ಗ್ರಾಮದ ಯುವಕನೊಂದಿಗೆ ಪರಿಚಯ ಹೊಂದಿದ್ದಳು. ಕೆಲವು ದಿನಗಳಿಂದ ಯುವಕ ಮನೆಗೆ ಬರುತ್ತಿದ್ದ ವಿಷಯ ಬಾಲಕಿಯ ಅಣ್ಣನ ಮೂಲಕ ತಾಯಿಗೆ ತಿಳಿದಿದೆ. ಊರಿನಲ್ಲಿ ಅಪವಾದ ಬರುತ್ತದೆ, ಓದು ಹಾಳಾಗುತ್ತದೆ ಎಂದು ತಾಯಿ ಮಗಳಿಗೆ ತಿಳಿಹೇಳಿದ್ದರು.
ತಾ.15 ರ ಮಧ್ಯಾಹ್ನ ಮನೆಯಲ್ಲಿ ಟಿವಿ ನೋಡುತ್ತಿದ್ದ ಬಾಲಕಿ ಏಕಾಏಕಿ ಕಣ್ಮರೆಯಾಗಿದ್ದಾಳೆ. ಟಿವಿ ಬಂದ್ ಮಾಡಿ ಊಟ ಮಾಡಲು ತಾಯಿ ಕರೆದಾಗ ಮಗಳು ಇರಲಿಲ್ಲ. ಮನೆ ಹುಡುಕಿದಾಗ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬಂದಿದೆ.
ತಾಯಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
ಕಿಶೋರ್ ಕುಮಾರ್ ಶೆಟ್ಟಿ