Kodagu

ವಿರಾಜಪೇಟೆ SKSSF ವಲಯ ನೂತನ ಸಮಿತಿ ಅಸ್ತಿತ್ವಕ್ಕೆ: ಅಧ್ಯಕ್ಷರಾಗಿ ಅಶ್ರಫ್ ಫೈಝಿ ಆಯ್ಕೆ

admincoorgdaily

ವಿರಾಜಪೇಟೆ SKSSF ವಲಯ ನೂತನ ಸಮಿತಿ ಅಸ್ತಿತ್ವಕ್ಕೆ: ಅಧ್ಯಕ್ಷರಾಗಿ ಅಶ್ರಫ್ ಫೈಝಿ ಆಯ್ಕೆ
1002626597.jpg


ವಿರಾಜಪೇಟೆ: ವಿರಾಜಪೇಟೆ ನುಸ್ರತುಲ್ ಉಲೂಮ್ ಮದರಸ ಆವರಣದಲ್ಲಿ SKSSF ವಿರಾಜಪೇಟೆ ವಲಯದ ನೂತನ ಸಮಿತಿ ರಚನಾ ಸಭೆ ನಡೆಯಿತು.
ವಲಯ ಅಧ್ಯಕ್ಷ ಹನೀಫ್ ಫೈಝಿ ಅಧ್ಯಕ್ಷತೆ ವಹಿಸಿದ್ದರು. ವಲಯ ಕಾರ್ಯದರ್ಶಿ ಅಬ್ದುಲ್ ಹಕೀಮ್ ಹಿಶಾಮಿ ಸ್ವಾಗತಿಸಿದರು. ಜಿಲ್ಲಾ ಅಧ್ಯಕ್ಷ ಶುಹೈಬ್ ಫೈಝಿ ಸಭೆಯನ್ನು ಉದ್ಘಾಟಿಸಿ, ಸಮಸ್ತದ ಅಧೀನದಲ್ಲಿ ಕಾರ್ಯನಿರ್ವಹಿಸುವ ಮಹತ್ವ ಹಾಗೂ SKSSF ಮೆಂಬರ್‌ಶಿಪ್‌ನ ಪ್ರಯೋಜನಗಳ ಕುರಿತು ವಿವರಿಸಿದರು.

SKSSF ರಾಜ್ಯ ಸಮಿತಿ ಉಪಾಧ್ಯಕ್ಷ ತಮ್ಲೀಕ್ ದಾರಿಮಿ, VRJM ಕಾರ್ಯದರ್ಶಿ ಮುಹಮ್ಮದ್ ಹನೀಫ್ ಫೈಝಿ, ಯೂಸುಫ್ ಕಲ್ಲುಬಾನೆ ಮತ್ತಿತರರು ಶುಭ ಹಾರೈಸಿ ಮಾತನಾಡಿದರು. ನೂತನ ಸಮಿತಿ ರಚನಾ ಪ್ರಕ್ರಿಯೆಯ ನೇತೃತ್ವವನ್ನು ಜಿಲ್ಲಾ ಕಾರ್ಯದರ್ಶಿ ರಫೀಕ್ ಬಾಖವಿ ವಹಿಸಿದ್ದರು.

ನೂತನ ಸಮಿತಿಯಲ್ಲಿ ಅಧ್ಯಕ್ಷರಾಗಿ ಮುಹಮ್ಮದ್ ಅಶ್ರಫ್ ಫೈಝಿ, ಪ್ರಧಾನ ಕಾರ್ಯದರ್ಶಿಯಾಗಿ ಶರಫುದ್ದೀನ್, ಖಜಾಂಚಿಯಾಗಿ ನೌಶಾದ್ ದಾರಿಮಿ, ವರ್ಕಿಂಗ್ ಕಾರ್ಯದರ್ಶಿಯಾಗಿ ಶಿಬಿಲಿ ಫೈಝಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸಹದ್ ಫೈಝಿ, ಜಂಶೀರ್, ಮುಹಮ್ಮದ್ ರಫೀಕ್ ಹಾಗೂ ಜೊತೆ ಕಾರ್ಯದರ್ಶಿಗಳಾಗಿ ಜಾಸಿರ್ ಫೈಝಿ, ಶಿಹಾಬ್, ಶಾನಿದ್ ಅವರನ್ನು ಆಯ್ಕೆ ಮಾಡಲಾಗಿದೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಫಿರೋಜ್, ಜಮೀರ್ ಅಜ್ ಹರಿ, ರಾಶಿಕ್, ಉಸ್ಮಾನ್ ಮುಸ್ಲಿಯಾರ್, ಆಸ್ಕರ್, ಅಸ್ಲಂ ಫೈಝಿ, ಅಶ್ರೀಫ್, ನೌಫಲ್, ನಿಯಾಝ್, ಸಫೀರ್, ಸಿದ್ದೀಕ್ ಅಜ್ ಹರಿ ನೇಮಕಗೊಂಡಿದ್ದಾರೆ. ಕೊನೆಯಲ್ಲಿ ನೂತನ ಪ್ರಧಾನ ಕಾರ್ಯದರ್ಶಿ ಶರಫುದ್ದೀನ್ ವಂದಿಸಿದರು.