ವಿರಾಜಪೇಟೆ ಟೌನ್ ಕಾಂಗ್ರೆಸ್ ಸಮಿತಿ ನೂತನ ಪದಾಧಿಕಾರಿಗಳ ನೇಮಕ
admincoorgdaily

ವಿರಾಜಪೇಟೆ:ವಿರಾಜಪೇಟೆ ಟೌನ್ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನಾಯಕರಿಗೆ ಪ್ರಮುಖ ಜವಾಬ್ದಾರಿಗಳನ್ನು ವಹಿಸಲಾಗಿದೆ.
ಅಧ್ಯಕ್ಷರಾದ ಮಾಳೇಟಿರ ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ಉಪಾಧ್ಯಕ್ಷ ಶಾಹುಲ್ ಹಮೀದ್, ಕೋಶಾಧಿಕಾರಿ ತನ್ವೀರ್ ರಹೀಮ್, ಪ್ರಧಾನ ಕಾರ್ಯದರ್ಶಿ ಶಶಿಧರನ್, ಕಾರ್ಯದರ್ಶಿಗಳಾಗಿ ಅನಿತಾ ಮತ್ತು ರಾಹುಫ್, ಜಂಟಿ ಕಾರ್ಯದರ್ಶಿ ಸಚೀಂದ್ರ, ಸಂಘಟನಾ ಕಾರ್ಯದರ್ಶಿ ಮೊಹಮ್ಮದ್ ನಯಾಜ್ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ, ದಿನೇಶ್, ಜಲೀಲ್, ರಜನಿಕಾಂತ್, ಸೈನುದ್ದೀನ್, ಕೆ.ಡಿ. ಪ್ರದೀಪ್, ಫ್ರಾನ್ಸಿಸ್, ಆಸಿಫ್, ರಜತ್ ಮೆಂಡೋನ್ಸ, ಜೂಡಿ, ನಿತಿನ್ ಎಂ.ಕೆ., ಬಿಲ್ಟನ್, ಜಯನ್, ಆಶಿಫ್ ಮೊಸೀನ್, ಮುನ್ನರ್ ಅಜೀಜ್, ಅನಿತಾ, ವಿಲೀನಾ ಹಾಗೂ ತಬ್ರುಜ್ ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿದೆ.
ವಿಶೇಷ ಆಹ್ವಾನಿತರಾಗಿ ಪೂವಯ್ಯ ಮಾಡಂಡ ಪೃಥ್ವಿನಾಥ್ ಸಿ.ಕೆ., ಕರುಣ್ ಕಾಳಯ್ಯ, ನರೇಂದ್ರ ಕಾಮತ್, ಮೋಹನ್ ಜಿ.ಜಿ., ತಿಮ್ಮಯ್ಯ ಮಾದಂಡ ಮತ್ತು ಎಜಾಜ್ ಅಹ್ಮದ್ ಅವರನ್ನು ವಿಶೇಷ ಆಹ್ವಾನಿತರನ್ನಾಗಿ ಆಯ್ಕೆ ಮಾಡಲಾಗಿದೆ.
ಜೊತೆಗೆ, ಪಟ್ಟಣದ ಎಲ್ಲಾ ಡಿ.ಸಿ.ಸಿ. ಹಾಗೂ ಬಿ.ಸಿ.ಸಿ. ಸಮಿತಿ ಸದಸ್ಯರು ಈ ಸಮಿತಿಯ ವಿಶೇಷ ಆಹ್ವಾನಿತರಾಗಿ ಮುಂದುವರಿಯಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.