Kodagu

ತೊರೆನೂರಿನಲ್ಲಿ ವಿಶ್ವಕರ್ಮ ಜಯಂತೋತ್ಸವ: ಮೆರವಣಿಗೆ

admincoorgdaily

ತೊರೆನೂರಿನಲ್ಲಿ ವಿಶ್ವಕರ್ಮ ಜಯಂತೋತ್ಸವ: ಮೆರವಣಿಗೆ
ಕುಶಾಲನಗರ, ಸೆ.17:  ಕುಶಾಲನಗರ ತಾಲ್ಲೂಕಿನ ತೊರೆನೂರು ಗ್ರಾಮದಲ್ಲಿ 
ವಿಶ್ವಕರ್ಮ ಸಮಾಜದ ವತಿಯಿಂದ ಗುರುವಾರ
(ಸೆಪ್ಟೆಂಬರ್ 17 ರಂದು)
 ವಿಶ್ವಕರ್ಮ ಜಯಂತಿ  ಆಚರಿಸಲಾಯಿತು.
ವಿಶ್ವಕರ್ಮ ಜಯಂತಿ 
ನಿಮಿತ್ತ ವಿಶ್ವಕರ್ಮ ಜಯಂತ್ಯೋತ್ಸವ ಸಮಿತಿ ವತಿಯಿಂದ ಅಲಂಕೃತ ಬೆಳ್ಳಿರಥದಲ್ಲಿ ವಿಶ್ವಕರ್ಮ ಮೂರ್ತಿಯನ್ನಿಟ್ಟು ಗ್ರಾಮದಲ್ಲಿ ಮೆರವಣಿಗೆ ಮೆರವಣಿಗೆ ನಡೆಸಲಾಯಿತು.

ಮೊದಲಿಗೆ ಗ್ರಾಮದ ಶ್ರೀ ಕಾಳಿಕಾಂಭ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಭಕ್ತಾದಿಗಳು ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು.
 ಜಯಂತೋತ್ಸವದಲ್ಲಿ  ಮಾತನಾಡಿದ ಗ್ರಾಮದ ವಿಶ್ವಕರ್ಮ ಸಮಾಜದ ಅಧ್ಯಕ್ಷ ಟಿ.ಎಸ್.ಪ್ರಕಾಶಚಾರಿ  ವಿಶ್ವಕರ್ಮ ಜಯಂತಿ ಎಂಬುದು ವಿಶ್ವಕರ್ಮರ ಜನ್ಮ ದಿನವನ್ನು ಆಚರಿಸುವ ಪದ್ಧತಿಯಾಗಿದೆ.ಸಮಾಜದ ಅಭಿವೃದ್ಧಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾದದ್ದು ಎಂದರು.

ಸಮಾಜದ ಉಪಾಧ್ಯಕ್ಷ
ಟಿ.ಎಸ್.ಮೂರ್ತಾಚಾರಿ,
ಕಾರ್ಯದರ್ಶಿ ಟಿ.ಎನ್.ದೇವರಾಜ್, ಕೋಶಾಧಿಕಾರಿ ಟಿ.ಎನ್.ಜಗದೀಶ್, ಪದಾಧಿಕಾರಿಗಳಾದ ಟಿ.ಎಸ್.
 ಗಣೇಶಚಾರಿ, ಟಿ.ಆರ್. ಪ್ರಸನ್ನ, ಟಿ.ವಿ.ಡಂಕಣಚಾರಿ, ಟಿ.ಆರ್. ಮಂಜುನಾಥ್ ಇತರರು ಇದ್ದರು.
ಮೆರವಣಿಗೆಯಲ್ಲಿ ಸಮಾಜದ ಬಂಧುಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.