Kodagu

ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ವಾಯ್ಸ್ ಆಫ್ ವಿರಾಜಪೇಟೆ ಸ್ಫರ್ಧಾ ಕಾರ್ಯಕ್ರಮ

admincoorgdaily

ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ವಾಯ್ಸ್ ಆಫ್ ವಿರಾಜಪೇಟೆ ಸ್ಫರ್ಧಾ ಕಾರ್ಯಕ್ರಮ
ವಿರಾಜಪೇಟೆ: ಸ್ಥಳೀಯ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಗೌರಿ ಗಣೇಶ ಉತ್ಸವ ಸಮಿತಿಯ ವತಿಯಿಂದ ಆಯೋಜಿಸಲಾಗಿರುವ ಗೌರಿ ಗಣೇಶೋತ್ಸವವು 11 ದಿನಗಳ ಕಾಲ ಅತ್ಯಂತ ವೈಭವ ಹಾಗೂ ಶ್ರದ್ಧಾಭಕ್ತಿಗಳಿಂದ ನಡೆಯುತ್ತಿದ್ದು, 20 ರಂದು ಬೆಳಿಗ್ಗೆ 11ಗಂಟೆಯಿಂದ ಎನ್. ವೆಂಕಟೇಶ್ ಕಾಮತ್ ಟ್ರಸ್ಟ್ ಸಹಯೋಗದೊಂದಿಗೆ "ವಾಯ್ಸ್ ಆಫ್ ವಿರಾಜಪೇಟೆ -2026" ಗಾಯನ ಸ್ಪರ್ಧೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ರವೀಂದ್ರನಾಥ ಕಾಮತ್ ಹೇಳಿದರು.

  ಈ ಕುರಿತು ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದ ರೂಪುರೇಷೆ ಕುರಿತ ಸಭೆಯಲ್ಲಿ ಮಾಹಿತಿ ನೀಡಿ ಮಾತನಾಡಿದ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ರವೀಂದ್ರನಾಥ ಕಾಮತ್ ಅವರು, 250ಕ್ಕೂ ಹೆಚ್ಚು ಕಾಲಗಳ ಇತಿಹಾಸ ಹೋಂದಿರುವ ಈ ದೇವಸ್ಥಾನದಲ್ಲಿ "ಪ್ರತಿ ವರ್ಷದಂತೆ ಈ ಬಾರಿಯೂ ಸಾರ್ವಜನಿಕರ ಹಾಗೂ ಭಕ್ತಾದಿಗಳ ಸಹಯೋಗದೊಂದಿಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಅನ್ನ ಸಂತರ್ಪಣೆಯನ್ನು ಆಯೋಜಿಸಿಕೊಂಡು ಬರಲಾಗುತ್ತಿಯೀಗಾಗಲೇ ಮುತ್ತೈದೆಯರಿಂದ ವಿಶೇಷ ಗೌರಿ ಪೂಜೆ ಹಾಗೂ ಗೌರಮ್ಮನ ಪಲ್ಲಕ್ಕಿ ಉತ್ಸವ ನೆರವೇರಿದೆ. ಸೆಪ್ಟೆಂಬರ್ 25 ರಂದು ವಿಜೃಂಭಣೆಯ ಶೋಭಾಯಾತ್ರೆ ನಡೆಯಲಿದ್ದು, ಸೆಪ್ಟೆಂಬರ್ 26 ರಂದು ಬೆಳಿಗ್ಗೆ ಶ್ರೀ ಗೌರಿ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದೆ" ಎಂದು ತಿಳಿಸಿದರು.

  ಇದೇ ಸಂದರ್ಭದಲ್ಲಿ ಮಾತನಾಡಿದ ಉಪಾಧ್ಯಕ್ಷರಾದ ಪುಷ್ಪರಾಜ್ ಜೈನ್ ಅವರು, "ಭಾರತದಲ್ಲೇ ವಿರಾಜಪೇಟೆಯಲ್ಲಿ ನಡೆಯುವ ಗೌರಮ್ಮನ ಪಲ್ಲಕ್ಕಿ ಉತ್ಸವವು ಅತ್ಯಂತ ವಿಶಿಷ್ಟವಾದದ್ದು. ದೇಶದ ಎಲ್ಲೂ ಕಾಣಸಿಗದ ಇಂತಹ ಸುಂದರ ಸಂಪ್ರದಾಯ ಹಾಗೂ ಪರಂಪರೆ ನಮ್ಮ ವಿರಾಜಪೇಟೆಯಲ್ಲಿ ಜಾರಿಯಲ್ಲಿದೆ. ಗಣೇಶನ ಮೂರ್ತಿ ಪ್ರತಿಷ್ಠಾಪನೆಗೂ ಮುನ್ನವೇ ಗೌರಮ್ಮನ ಪಲ್ಲಕ್ಕಿ ಉತ್ಸವ ನಡೆಯುವುದು ಇಲ್ಲಿನ ವಿಶೇಷ. ಈ ಪವಿತ್ರ ಹಬ್ಬದ ಸಂದರ್ಭದಲ್ಲಿ ತವರುಮನೆಯ ಹೆಣ್ಣುಮಕ್ಕಳು ತಮ್ಮ ಊರಿಗೆ ಮರಳಿ ಬಂದು ಗೌರಮ್ಮನಿಗೆ ಪೂಜೆ ಸಲ್ಲಿಸುವ ವಿಶೇಷ ಪದ್ಧತಿ ನಡೆದುಕೊಂಡು ಬಂದಿದೆ"ಎಂದರು.
ಸೆ.18, 19 ರಂದು ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕöÈತಿಕ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಉಪನ್ಯಾಸ ನಡೆಯಲಿದೆ.

 21ರಂದು ಮೈಸೂರಿನ ಪ್ರಸಿದ್ಧ ಸುಗಮ ಸಂಗೀತ ಗಾಯಕರಾದ ಸುಮಾ ರಾಜಕುಮಾರ್ ಮತ್ತು ತಂಡದವರಿಂದ ಭಕ್ತಿ ಮತ್ತು ಸುಗಮ ಸಂಗೀತ, 22ರಂದು  ಶಿವಮೊಗ್ಗದ ರಂಗತರAಗ ತಂಡದ ಶ್ರೀ ಅವಿನಾಶ್ ಮತ್ತು ಬಳಗದಿಂದ "ಗಾನ ಅಮೃತ" (ಕನ್ನಡ, ಹಿಂದಿ, ತಮಿಳು, ಮಲಯಾಳಂ ಹಳೆಯ ಚಲನಚಿತ್ರ ಗೀತೆಗಳ ಕಾರ್ಯಕ್ರಮ). 24ರಂದು "ಬ್ರಹ್ಮಗಿರಿ" ವಾರಪತ್ರಿಕೆಯ ಸಂಪಾದಕ ಉಳ್ಳಿಯಡ ಎಂ. ಪೂವಯ್ಯ, ಅವರಿಗೆ ಬಸವಶ್ರೀ ಪ್ರಶಸ್ತಿ, ಸಮಾಜ ಸೇವೆಗಾಗಿ ಕೆಂಜಂಗಡ ರೋಷನ್ ನಾಣಯ್ಯ ಅವರನ್ನು ಸನ್ಮಾನಿಸಲಾಗುತ್ತದೆ. 
 25ರಮದು ರಾತ್ರಿ 8.00 ಗಂಟೆಗೆ ಮಹಾಪೂಜೆ. ರಾತ್ರಿ 8.30 ರಿಂದ ವಿದ್ಯುತ್ ದೀಪಾಲಂಕೃತ ಮಂಟಪದಲ್ಲಿ ನೃತ್ಯ-ರೂಪಕಗಳು ಹಾಗೂ ವಿಜೃಂಭಣೆಯ ಶೋಭಾಯಾತ್ರೆ. 26 ರಂದು ಬೆಳಿಗ್ಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀ ಗೌರಿ ಗಣೇಶ ಮೂರ್ತಿಗಳ ವಿಸರ್ಜನಾ ಮಹೋತ್ಸವ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕಾಗಿ ತಿಳಿಸಿದರು.

 ಈ ಸಂದರ್ಭದಲ್ಲಿ ಕಾರ್ಯದರ್ಶಿ ಜೆ. ಎನ್. ಪ್ರಸಾದ್, ವಿ.ಆರ್. ಪುರುಷೋತ್ತಮ್, ಜೆ.ಪಿ. ಅರುಣ್ ಜೈನ್, ಸದಸ್ಯರಾದ ಜೆ.ವಿ. ಪ್ರಕಾಶ್, ಡಾ.ಎನ್. ವೀರೇಂದ್ರ ಕಾಮತ್, ನರೇಂದ್ರ ಕಾಮತ್, ಚಂದ್ರ ಪ್ರಸಾದ್, ರಾಜೇಂದ್ರ ಕಾಮತ್ ಸೇರಿದಂತೆ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.