ವಾಲಿಬಾಲ್ ಪಂದ್ಯಾಟ: ಕುಶಾಲನಗರ ಮೂಕಾಂಬಿಕಾ ಪ್ರೌಢಶಾಲೆ ತಾಲೂಕು ಮಟ್ಟಕ್ಕೆ ಆಯ್ಕೆ
admincoorgdaily

ಕುಶಾಲನಗರ:
ಇಲ್ಲಿನ ಮೂಕಾಂಬಿಕಾ ಅನುದಾನಿತ ಪ್ರೌಢಶಾಲೆಯ ಬಾಲಕರ ತಂಡವು 2026-27ನೇ ಶೈಕ್ಷಣಿಕ ಸಾಲಿನ ಕುಶಾಲನಗರ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸಿ, ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.
ಪಂದ್ಯಾವಳಿಯುದ್ದಕ್ಕೂ ಶಿಸ್ತುಬದ್ಧ ಹಾಗೂ ಚುರುಕಿನ ಪ್ರದರ್ಶನ ನೀಡಿದ ಶಾಲೆಯ ಬಾಲಕರು ಎದುರಾಳಿ ತಂಡಗಳನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಉತ್ತಮ ಕ್ರೀಡಾ ಕೌಶಲ ಮೆರೆದ ವಿದ್ಯಾರ್ಥಿಗಳಿಗೆ ಕ್ರೀಡಾಂಗಣದಲ್ಲಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಶಾಲೆಗೆ ಕೀರ್ತಿ ತಂದ ಕ್ರೀಡಾಪಟುಗಳಿಗೆ ಮೂಕಾಂಬಿಕಾ ಪ್ರೌಢಶಾಲೆಯ ಅಧ್ಯಕ್ಷರಾದ ಶ್ರೀಮತಿ ಕೆ.ಪಿ. ಚಂದ್ರಕಲಾ, ಮುಖ್ಯೋಪಾಧ್ಯಾಯರಾದ ಸುರೇಶ್ ಡಿ.ಕೆ., ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ತಂಡದ ತರಬೇತುದಾರರಾದ ಪ್ರತಾಪ್ ಟಿ.ಎನ್., ಶಿಕ್ಷಕರಾದ ಕಾಂತರಾಜು ಕೆ.ಎಂ., ಚಂದ್ರಶೇಖರ್ ಆರ್., ನಗಿನ ಬಾನು ಫಯಾಜ್, ಸುರೇಶ್, ಮೋಹನೇಶ್ವರಿ ಸ್ವಾಮಿ ಹಾಗೂ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾರ್ದಿಕ ಅಭಿನಂದನೆ ಸಲ್ಲಿಸಿ ಮುಂದಿನ ಹಂತದ ಪಂದ್ಯಗಳಿಗೆ ಶುಭ ಹಾರೈಸಿದ್ದಾರೆ.