ಕಾಡಾನೆ ದಾಳಿ: ತೋಟದ ಮಾಲೀಕ ಸ್ಥಳದಲ್ಲೇ ಸಾವು
admincoorgdaily

ಮಡಿಕೇರಿ;ಬೆಳಗ್ಗೆ ತೋಟಕ್ಕೆ ಹೋದ ಮಾಲೀಕ ಮತ್ತೆ ಮನೆಗೆ ವಾಪಸ್ ಬರಲೇ ಇಲ್ಲ. ಕಾಡಾನೆಯ ಭೀಕರ ದಾಳಿಗೆ ತೋಟದ ಮಾಲೀಕ ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ತಾರೀಕಟ್ಟೆ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮೃತ ದುರ್ದೈವಿಯನ್ನು ಕೇಶವಯ್ಯ (50) ಎಂದು ಗುರುತಿಸಲಾಗಿದೆ.
ಇಂದು ಬೆಳಗ್ಗೆ ಎಂದಿನಂತೆ ತೋಟದೊಳಗೆ ಸಂಚರಿಸುತ್ತಿದ್ದಾಗ ಎದುರು ಬಂದ ಕಾಡಾನೆ ಕೇಶವಯ್ಯ ಅವರ ಮೇಲೆ ದಾಳಿ ಮಾಡಿದೆ. ದಾಳಿಯ ರಭಸಕ್ಕೆ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಮತ್ತು ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮದಲ್ಲಿ ಶೋಕದ ವಾತಾವರಣ ಮನೆಮಾಡಿದೆ.
ಕಾಡಾನೆಗಳ ಹಾವಳಿಯಿಂದ ಕೊಡಗಿನ ಜನರು ಪ್ರತಿದಿನ ಭಯದಲ್ಲೇ ಬದುಕಬೇಕಾಗಿದೆ. ತೋಟಕ್ಕೆ ಹೋಗುವುದೇ ಈಗ ಜೀವಕ್ಕೆ ಅಪಾಯವಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು, ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.