Kodagu

ಸಿದ್ದಾಪುರ ಪಟ್ಟಣಕ್ಕೆ ಬೆಳಗಿನ ಜಾವ ಕಾಡಾನೆಗಳ ಸಂಚಾರ

admincoorgdaily

ಸಿದ್ದಾಪುರ ಪಟ್ಟಣಕ್ಕೆ ಬೆಳಗಿನ ಜಾವ ಕಾಡಾನೆಗಳ ಸಂಚಾರ
ಸಿದ್ದಾಪುರ :-
ಸಿದ್ದಾಪುರದಿಂದ ಮೈಸೂರು ಕಡೆಗೆ ತೆರಳುವ ರಸ್ತೆಯ ಮೂಲಕ ಬಂದ ಕಾಡಾನೆಗಳು ಸ್ವರ್ಣ ಮಾಲ್ ಕಲ್ಯಾಣ ಮಂಟಪದ ಮಾರ್ಗವಾಗಿ ಪಟ್ಟಣದ ಪೆಟ್ರೋಲ್ ಬಂಕ್ ಬಳಿ ಸಂಚರಿಸಿ ಬಳಿಕ ಸಮೀಪದ ತೋಟದತ್ತ ತೆರಳಿವೆ. ಅಕ್ಕಪಕ್ಕದ ಮನೆಗಳ ಸಿಸಿ ಕ್ಯಾಮೆರಾಗಳಲ್ಲಿ ಕಾಡಾನೆಗಳ ಚಲನವಲನ ದಾಖಲಾಗಿದೆ.

ಇತ್ತೀಚಿನ ದಿನಗಳಲ್ಲಿ ಕಾಡಾನೆಗಳು ಪದೇಪದೇ ಪಟ್ಟಣದತ್ತ ಬರುತ್ತಿರುವುದರಿಂದ ಜನರು ಆತಂಕದಿಂದ ಜೀವನ ನಡೆಸುವಂತಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಡಾನೆಗಳ ಹಾವಳಿ ನಿಯಂತ್ರಿಸಲು ಅರಣ್ಯ ಇಲಾಖೆ ತಕ್ಷಣ ಕಾರ್ಯಾಚರಣೆ ನಡೆಸಿ ಅವುಗಳನ್ನು ಕಾಡಿಗೆ ಅಟ್ಟುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.