ಗೋಣಿಕೊಪ್ಪದಲ್ಲಿ ಮಹಿಳಾ ದಸರಾ ಸಮಿತಿ ಸಭೆ
admincoorgdaily

ಗೋಣಿಕೊಪ್ಪ: ಶ್ರೀ ಕಾವೇರಿ ದಸರಾ ಸಮಿತಿ - 2026ನೇ ಸಾಲಿನ 11ನೇ ವರ್ಷದ ಮಹಿಳಾ ದಸರಾ ಪೂರ್ವಭಾವಿ ಸಭೆಯನ್ನು ಗೋಣಿಕೊಪ್ಪ ಗ್ರಾಮ ಪಂಚಾಯತ್ ಹಳೇ ಸಭಾಂಗಣದಲ್ಲಿ ನಡೆಸಲಾಯಿತು.
ಅಧ್ಯಕ್ಷೆ ಮಂಜುಳಾ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹಿಳಾ ದಸರಾ ಕಾರ್ಯಕ್ರಮಗಳ ರೂಪುರೇಷೆ ಬಗ್ಗೆ ಚರ್ಚಿಸಲಾಯಿತು. ಸದಸ್ಯರ ಸಲಹೆಗಳ ಮೇರೆಗೆ ಕೆಲವು ಕಾರ್ಯಕ್ರಮಗಳಲ್ಲಿ ಬದಲಾವಣೆ ತರಲಾಯಿತು.
ಮಹಿಳೆಯರಿಗೆ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳ ಬಗ್ಗೆ ಈಗಾಗಲೇ ಪಟ್ಟಿ ಮಾಡಿಕೊಳ್ಳಲಾಗಿದ್ದು, ಪೂರ್ಣ ವಿವರವನ್ನು ನಾಳೆ ನೀಡುವುದಾಗಿ ಅಧ್ಯಕ್ಷೆ ಮಂಜುಳಾ ಅವರು ತಿಳಿಸಿದರು.
ಸಭೆಯಲ್ಲಿ ಶ್ರೀ ಕಾವೇರಿ ದಸರಾ ಸಮಿತಿಯ ಸಂಯೋಜಕಿ ಶೀಲಾ ಬೋಪಣ್ಣ, ಸಾಂಸ್ಕೃತಿಕ ಸಮಿತಿ ಸದಸ್ಯೆ ಚಂದನ ಮಂಜುನಾಥ್, ಮಕ್ಕಳ ದಸರಾ ಸಮಿತಿ ಸದಸ್ಯೆ ಓಮನಾ, ಕಾರ್ಯದರ್ಶಿಗಳಾದ ಸಪ್ತಾಸ್, ವರಮಹಾಲಕ್ಷ್ಮಿ, ಧನ್ಯರತಿ, ರಮಾವತಿ, ಲಕ್ಷ್ಮಿ, ಚೈತ್ರ, ಗೀತಾ, ಪುಷ್ಪ ಮತ್ತಿತರರು ಉಪಸ್ಥಿತರಿದ್ದರು.