Kodagu

ಟಿಂಬರ್ ಕೆಲಸ ಮಾಡುವ ವೇಳೆ ಮರದ ದಿಮ್ಮಿ ತಲೆಗೆ ಬಿದ್ದು ಕಾರ್ಮಿಕ ಸಾವು

admincoorgdaily

ಟಿಂಬರ್ ಕೆಲಸ ಮಾಡುವ ವೇಳೆ ಮರದ ದಿಮ್ಮಿ ತಲೆಗೆ ಬಿದ್ದು ಕಾರ್ಮಿಕ ಸಾವು
ಸಿದ್ದಾಪುರ: ಟಿಂಬರ್ ಕೆಲಸ ಮಾಡುವ ವೇಳೆ ಮರದ ದಿಮ್ಮಿ ತಲೆಗೆ ಬಿದ್ದು ಕಾರ್ಮಿಕ ಸಾವನ್ನಪ್ಪಿರುವ ಘಟನೆ 
ಅಭ್ಯತ್ ಮಂಗಲ ಗ್ರಾಮದಲ್ಲಿ ನಡೆದಿದೆ.
ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯ ಘಟ್ಟದಳ್ಳ ನಿವಾಸಿ ಅನೀಶ್ (39) ಮೃತ ದುರ್ದೈವಿ.

ಟಿಂಬರ್ ಕೆಲಸ ಮಾಡುತ್ತಿದ್ದ ಅನೀಶ್ ಅಭ್ಯತ್ ಮಂಗಲ ಗ್ರಾಮದ ಕಾಸಗಿ ತೋಟದಲ್ಲಿ ಟಿಂಬರ್ ಕೆಲಸ ಮಾಡುತ್ತಿದ್ದರು. ಮರದ ದಿಮ್ಮಿಗಳನ್ನು ತೋಟದಿಂದ ರಸ್ತೆ ಬದಿಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ದಿಮ್ಮಿಯೊಂದು ಅನೀಶ್ ತಲೆಗೆ ಬಿದ್ದಿದೆ. ಗಂಭೀರ ಗಾಯಗೊಂಡ ಅನೀಶ್‌ಗೆ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ರವಾನಿಸುವ ಸಂದರ್ಭದಲ್ಲಿ ಅನೀಶ್ ಮೃತಪಟ್ಟಿದ್ದಾರೆ.
ಮೃತ ಅನೀಶ್ ಇಬ್ಬರು ಪುಟ್ಟ ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಮಡಿಕೇರಿಯ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ.