Kodagu

ವಿಶ್ವ ಮಧುಮೇಹ ದಿನ; ಬಲ್ಲಮಾವಟ್ಟಿಯಲ್ಲಿ ಆರೋಗ್ಯ ಶಿಬಿರ!

admincoorgdaily

ವಿಶ್ವ ಮಧುಮೇಹ ದಿನ; ಬಲ್ಲಮಾವಟ್ಟಿಯಲ್ಲಿ ಆರೋಗ್ಯ ಶಿಬಿರ!
ಬಲ್ಲಮಾವಟ್ಟಿ:ಇಂದು ಬಲ್ಲಮಾವಟ್ಟಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಜಾಸೇವಾ ಅಭಿಯಾನದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ ಆರೋಗ್ಯ ತಪಾಸಣಾ ಶಿಬಿರ ಮತ್ತು ಮಾಹಿತಿ ಶಿಕ್ಷಣ ಸ್ಟಾಲ್‌ಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡುವ ಮೂಲಕ ಸ್ವಸ್ಥ ಆರೋಗ್ಯ ಸಮಾಜ ಕಟ್ಟಲು ಕರೆ ನೀಡಿದರು.

ಈ ಸಂದರ್ಭದಲ್ಲಿ ಡಾ. ಸುನಿಲ್ ತಾಲ್ಲೂಕು ಆರೋಗ್ಯಾಧಿಕಾರಿಗಳು, ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ. ಶ್ರೀನಾಥ್ ಮತ್ತು ಪ್ರೇಮ್ ಕುಮಾರ್, ಡಾ. ರಾಶೀಫ್ ಮತ್ತು CHOs ಮಿಲನ್ ಮತ್ತು ಮಿಲನ, ದೇವಿ ಪ್ರಸಾದ್ ಹಾಗೂ ಆಶಾ ಕಾರ್ಯಕರ್ತರು ಹಾಜರಿದ್ದರು.