Kodagu

ಕೊಯನಾಡು ಸಕಾ೯ರಿ ಶಾಲೆಯಲ್ಲಿ ಯೋಗ ಸಿಂಚನ

admincoorgdaily

ಕೊಯನಾಡು ಸಕಾ೯ರಿ ಶಾಲೆಯಲ್ಲಿ ಯೋಗ ಸಿಂಚನ
ಮಡಿಕೇರಿ ; ಕೊಯನಾಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಯೋಗ ಸಿಂಚನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ  ವಿದ್ಯಾಥಿ೯ಗಳು ಯುವಯೋಗ ಸಾಧಕಿ ಮದೆನಾಡು ಗ್ರಾಮದ ಸಿಂಚವಾ  ಪ್ರದಶಿ೯ಸಿದ ಯೋಗವನ್ನು ಉತ್ಸಾಹದಿಂದ  ವೀಕ್ಷಿಸಿದರು, ಮುಖ್ಯ ಶಿಕ್ಷಕಿ   ವನಿತಾ, ಸಹಶಿಕ್ಷಕರು,ಶಿಕ್ಷಕೇತರ ವರ್ಗದವರು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಮಕ್ಕಳ ಪೋಷಕರು, ಅಂಗನವಾಡಿ ಮಕ್ಕಳು, ಗ್ರಾಮಸ್ಥರು, ಚಾಮುಂಡೇಶ್ವರಿ ದೇವಾಲಯದ ಅಧ್ಯಕ್ಷ ಯಶೋದರ ಹಾಜರಿದ್ದರು.

ಮುಖ್ಯೋಪಾಧ್ಯಾಯರ ಅನಿಸಿಕೆ   ಸಿಂಚನವರು ಯೋಗ ಸಿಂಚನ ಕಾರ್ಯಕ್ರಮ ಅತ್ಯದ್ಭುತವಾಗಿತ್ತು. ಈಕೆಯ ಪ್ರತಿಭೆ ಅಸಾದಾರಣ ವಾದದ್ದು. ಹಳ್ಳಿಯ ವಾತಾವರಣದಲ್ಲಿ ಬೆಳೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಡಿರುವ ಸಾಧನೆ ನಿಜಕ್ಕೂ ಪ್ರಶಂಸಾರ್ಥಾ ನಮ್ಮ ಜಿಲ್ಲೆಗೆ ಹೆಮ್ಮೆ ಪಡುವ ವಿಷಯ. ನಮ್ಮ ದೇಶದ ಎಲ್ಲಾ ಮಕ್ಕಳಿಗೆ  ಸಿಂಚನಾಳ ಯೋಗ ಪ್ರತಿಭೆಯು ಸ್ಪೂರ್ತಿಯಾಗಲಿ ಎಂಬ ಮುಕ್ಯ ಶಿಕ್ಷಕಿ ವನಿತಾ ಹಾರೈಸಿದರು.   ಸಿಂಚನಾಳ ಪೋಷಕರಾದ ಕೀತಿ೯ಕುಮಾರ್ , ರೇಣುಕಾ ಹಾಜರಿದ್ದರು.