ಮದೆ ಮಹೇಶ್ವರ ಕಾಲೇಜಿನಲ್ಲಿ ಯೋಗ ಸಿಂಚನ
admincoorgdaily

ಮಡಿಕೇರಿ; ಮದೆನಾಡುವಿನ ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಯೋಗ ಸಿಂಚನ ಕಾರ್ಯಕ್ರಮ ಆಯೋಜಿಸಲಾಗಿತ್ತು ಮದೆನಾಡಿನ ಯುವ ಯೋಗಸಾಧಕಿ ಸಿಂಚನಾಳಿಂದ ವಿವಿಧ ಯೋಗಭಂಗಿಗಳ ಪ್ರದಶ೯ನ ಗಮನ ಸೆಳೆಯಿತು, ಯೋಗದ ಮಹತ್ವದ ಬಗೆಗೆ ಸಿಂಚನಾ ವಿದ್ಯಾಥಿ೯ಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ವಾಣಿ, ಪ್ರಾಧ್ಯಾಪಕರು, ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕ ಚೆನ್ನಪ್ಪ, ಕಾಲೇಜಿನ ಸದಸ್ಯ ರಾಮಣ್ಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಅಗೋಳಿಕಜೆ, ಸಿಂಚನಾಳ ಪೋಷಕರಾದ ಕೀತಿ೯ ಕುಮಾರ್, ರೇಣುಕಾ ಉಪಸ್ಥಿತರಿದ್ದರು.