ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು
admincoorgdaily

ಸೋಮವಾರಪೇಟೆ: ಕಳೆದ ತಾ.16 ರಂದು ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕನೊಬ್ಬ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಘಟನೆ ಸಮೀಪದ ಅಭಿಮಠ ಬಾಚಳ್ಳಿ ಗ್ರಾಮದಲ್ಲಿ ನಡೆದಿದೆ.
ಅಭಿಮಠ ಬಾಚಳ್ಳಿ ಗ್ರಾಮದ ಸೋಮಶೇಖರ್-ಬೋಜಮ್ಮ ದಂಪತಿಯ ಪುತ್ರ ಪುನೀತ್ (27) ಮೃತ ಯುವಕ.
ಕಳೆದ ತಾ.16 ರಂದು ಅಸ್ವಸ್ಥಗೊಂಡಿದ್ದ ಪುನೀತ್ ನನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು, ಹಾಸನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಮೊನ್ನೆ ರಾತ್ರಿ ಡಯಾಲಿಸಿಸ್‌ಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು.
ನಿನ್ನೆ ದಿನ ಮನೆಗೆ ವಾಪಸ್ ಕರೆತರಲಾಗಿದ್ದು, ರಾತ್ರಿ ವೇಳೆ ತೀವ್ರ ಅಸ್ವಸ್ಥನಾಗಿ ಕೊನೆಯುಸಿರೆಳೆದಿದ್ದಾನೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ತಿಳಿದುಬಂದಿದೆ.