Kodagu

ಗೋಣಿಕೊಪ್ಪದಲ್ಲಿ ಯುವ ದಸರಾ ಸಮಿತಿ ಪೂರ್ವಭಾವಿ ಸಭೆ

admincoorgdaily

ಗೋಣಿಕೊಪ್ಪದಲ್ಲಿ ಯುವ ದಸರಾ ಸಮಿತಿ ಪೂರ್ವಭಾವಿ ಸಭೆ
ಗೋಣಿಕೊಪ್ಪ: ಶ್ರೀ ಕಾವೇರಿ ದಸರಾ ಸಮಿತಿ (ರಿ) ಗೋಣಿಕೊಪ್ಪ ಇದರ 48ನೇ ವರ್ಷದ ದಸರಾ ಪ್ರಯುಕ್ತ ಯುವ ದಸರಾ ಸಮಿತಿಯ ಪೂರ್ವಭಾವಿ ಸಭೆಯು ಸ್ಥಳೀಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಸಮಿತಿಯ ಅಧ್ಯಕ್ಷ ಅಂಕಿತ್ ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಾರಿಯ ಯುವ ದಸರಾದಲ್ಲಿ ಕಾರ್ಯಕ್ರಮಗಳನ್ನು ವಿಭಿನ್ನ ಹಾಗೂ ವಿನೂತನ ರೀತಿಯಲ್ಲಿ, ಶ್ರೀ ಕಾವೇರಿ ದಸರಾ ಸಮಿತಿಯ ಹಿರಿಯರ ಮಾರ್ಗದರ್ಶನದಂತೆ ಹಾಗೂ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗುವ ರೀತಿಯಲ್ಲಿ ಆಯೋಜನೆ ಮಾಡಲಾಗುವುದು ಎಂದು ಅಧ್ಯಕ್ಷ ಅಂಕಿತ್ ಪೊನ್ನಪ್ಪ ತಿಳಿಸಿದರು.

ಸಭೆಯಲ್ಲಿ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಪ್ರಮೋದ್ ಗಣಪತಿ, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ದಿಲಾನ್ ಚಂಗಪ್ಪ, ಮಹಿಳಾ ದಸರಾ ಸಮಿತಿಯ ಅಧ್ಯಕ್ಷೆ ಮಂಜುಳಾ, ಸಂಯೋಜಕಿ ಶೀಲಾ ಬೋಪಣ್ಣ, ಸಾಂಸ್ಕೃತಿಕ ಸಮಿತಿಯ ಸದಸ್ಯೆ ಚಂದನ ಮಂಜುನಾಥ್, ಮಕ್ಕಳ ದಸರಾ ಸಮಿತಿಯ ಸದಸ್ಯೆ ಓಮನಾ, ಶಕೀಲ್ ಅಹಮ್ಮದ್ ಹಾಗೂ ಯುವ ದಸರಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.