ಜಿಲ್ಲಾ ಪಂಚಾಯತ್ ಚುನಾವಣೆ: ವರ್ಗವಾರು ಮೀಸಲು ಪಟ್ಟಿ ಪ್ರಕಟ
admincoorgdaily
ಮಡಿಕೇರಿ;ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 (1993 ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ರ ಪ್ರಕರಣ 162 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸರ್ಕಾರವು ಈ ಕೆಳಗಿನ ಕೋಷ್ಟಕದ (2)ನೇ ಅಂಕಣದಲ್ಲಿನ ಪ್ರತಿಯೊಂದು *ಜಿಲ್ಲಾ ಪಂಚಾಯತಿಗೆ* ನಿಗದಿಪಡಿಸಲಾದ ಒಟ್ಟು ಸದಸ್ಯರ ಸಂಖ್ಯೆಯನ್ನು ಕೋಷ್ಟಕದ (3) ನೇ ಅಂಕಣದಲ್ಲಿ ಇರುವಂತೆ ಹಾಗೂ ಕೋಷ್ಟಕದ 4, 5, 6 ಮತ್ತು 7ನೇ ಅಂಕಣದಲ್ಲಿ ನಮೂದಿಸಿರುವ ಸದಸ್ಯ ಸಂಖ್ಯೆಯನ್ನು ಕ್ರಮವಾಗಿ ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗ "ಅ" ಮತ್ತು ಹಿಂದುಳಿದ ವರ್ಗ "ಬ" ಇವುಗಳಿಗೆ ಮೀಸಲಿರಿಸಲಾಗಿದ್ದು, ಅಂಕಣ (8) ರಲ್ಲಿ ನಮೂದಿಸಿರುವ ಸಂಖ್ಯೆ ಸಾಮಾನ್ಯ ವರ್ಗದ ಸ್ಥಾನಗಳೆಂದು ಮತ್ತು ಆವರಣಗಳಲ್ಲಿ ನಮೂದಿಸಿರುವ ಸ್ಥಾನಗಳು ಪ್ರತಿಯೊಂದು ಪ್ರವರ್ಗದಲ್ಲಿ ಮೀಸಲಿಟ್ಟಿರುವ ಸ್ಥಾನಗಳ ಪೈಕಿ ಮಹಿಳೆಯರಿಗಾಗಿ ಮೀಸಲಿರಿಸಲ್ಪಟ್ಟ ಸ್ಥಾನಗಳೆಂದೂ ನಿಗದಿಪಡಿಸಿ ಆದೇಶಿಸಿದೆ. ಸರ್ಕಾರವು ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಗಳನ್ನು ರದ್ದುಪಡಿಸಿದೆ.ಕೊಡಗು – 29 ಸ್ಥಾನ (15 ಮಹಿಳಾ)
- SC - 4 (2 ಮಹಿಳಾ)
- ST - 3 (2 ಮಹಿಳಾ)
- ಹಿಂ.ವರ್ಗ "ಅ" - 6 (3 ಮಹಿಳಾ)
- ಹಿಂ.ವರ್ಗ "ಬ" - 1 (1 ಮಹಿಳಾ)
- ಸಾಮಾನ್ಯ - 15 (7 ಮಹಿಳಾ)