ಜಿಲ್ಲಾ ಪಂಚಾಯತ್ ಕೂಡಿಗೆ ಮೀಸಲಾತಿ ಶಾಕ್;ರಾಜಕೀಯ ನಿವೃತ್ತಿ ವಿ.ಪಿ ಶಶಿಧರ್
admincoorgdaily

ಕುಶಾಲನಗರ:ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟಗೊಂಡ ಬೆನ್ನಲ್ಲೇ ಜಿ.ಪಂ. ಮಾಜಿ ಸದಸ್ಯ, ಹಾಲಿ ಕುಶಾಲನಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ತಾನು ಎಂಎಲ್ಎ ಚುನಾವಣಾ ಆಕಾಂಕ್ಷಿ ಅಲ್ಲ ಎಂಬುದನ್ನು ಈಗಾಗಲೇ ಬಹಿರಂಗಪಡಿಸಿದ್ದೆ. ಆದರೆ, ಈಗ ರಾಜಕೀಯದಿಂದಲೇ ದೂರ ಇರಲು ತೀರ್ಮಾನಿಸಿದ್ದೇನೆ. ಏಕೆಂದರೆ ಜಿಲ್ಲಾ ಪಂಚಾಯಿತಿ ಚುನಾವಣೆ ಸಂಬಂಧ ಕೂಡಿಗೆ ಕ್ಷೇತ್ರದಿಂದ ಸ್ಪರ್ಧಿಸುವ ಆಸೆ ತನಗಿತ್ತಾದರೂ ಇದೀಗ ಬಹುತೇಕರು ಒಗ್ಗೂಡಿ ಕುಶಾಲನಗರ ವ್ಯಾಪ್ತಿಯ ಯಾವುದೇ ಕ್ಷೇತ್ರದಲ್ಲೂ ಚುನಾವಣೆಗೆ ಸ್ಪರ್ಧಿಸಲು ತನಗೆ ಅವಕಾಶ ಸಿಗದಂತೆ ಮಾಡಿದ್ದಾರೆ. ಇಂತಹ ಘಟನೆಗಳು ತನ್ನ ರಾಜಕೀಯ ಬದುಕಿನಲ್ಲಿ ಹಲವಾರು ಬಾರಿ ನಡೆದಿದ್ದು, ಇದರಿಂದ ಮಾನಸಿಕವಾಗಿ ಬಳಲಿದ್ದೇನೆ. ಆದ್ದರಿಂದ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದೇನೆ. ಆದರೆ, ಸಾರ್ವಜನಿಕ ಕ್ಷೇತ್ರದಲ್ಲಿ ಮುಂದುವರಿಯಲಿದ್ದೇನೆ ಎಂದು ಸ್ಪಷ್ಟಪಡಿಸಿದರು.