ಏಷ್ಯಾ ಕಪ್ ವಿವಾದ: ಹಾರಿಸ್ ರೌಫ್ ಅಮಾನತು, ಸೂರ್ಯಕುಮಾರ್ ಗೆ ದಂಡ ವಿಧಿಸಿದ ಐಸಿಸಿ

Nov 5, 2025 - 09:56
 0  903
ಏಷ್ಯಾ ಕಪ್ ವಿವಾದ: ಹಾರಿಸ್ ರೌಫ್ ಅಮಾನತು, ಸೂರ್ಯಕುಮಾರ್ ಗೆ ದಂಡ ವಿಧಿಸಿದ ಐಸಿಸಿ
Photo credit: Times of Indian (ಫೋಟೋ: ಹ್ಯಾರಿಸ್ ರೌಫ್& ಸೂರ್ಯ ಕುಮಾರ್)

ದುಬೈ: ಏಷ್ಯಾ ಕಪ್ ವೇಳೆ ಭಾರತ–ಪಾಕಿಸ್ತಾನ ನಡುವಿನ ಪಂದ್ಯಗಳ ವೇಳೆ ನಡೆದ ವಿವಾದಾತ್ಮಕ ವರ್ತನೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕ್ರಮ ಕೈಗೊಂಡಿದೆ. ಪಾಕಿಸ್ತಾನದ ವೇಗಿ ಹಾರಿಸ್ ರೌಫ್ ಅವರನ್ನು ಎರಡು ಪಂದ್ಯಗಳಿಗೆ ಅಮಾನತುಗೊಳಿಸಲಾಗಿದ್ದು, ಭಾರತದ ಸೂರ್ಯಕುಮಾರ್ ಯಾದವ್ ಅವರಿಗೆ ಪಂದ್ಯ ಶುಲ್ಕದ ಶೇಕಡಾ 30ರಷ್ಟು ದಂಡ ವಿಧಿಸಲಾಗಿದೆ.

ದುಬೈನಲ್ಲಿ ನಡೆದ ಸೂಪರ್–4 ಹಂತದ ಪಂದ್ಯದಲ್ಲಿ ಹಾರಿಸ್ ರೌಫ್ ಆಕ್ರೋಶಭರಿತವಾಗಿ ಸನ್ನೆ ಪ್ರದರ್ಶನ ಮಾಡಿದ್ದು, ಅದು ಕ್ರೀಡಾಸಂಹಿತೆ ಉಲ್ಲಂಘನೆಯಾಗಿದೆ ಎಂದು ಐಸಿಸಿ ತಿಳಿಸಿದೆ. ಸೂರ್ಯಕುಮಾರ್ ಯಾದವ್ ಕೂಡ ಎದುರಾಳಿಗಳತ್ತ ತೋರಿದ ವರ್ತನೆಗಾಗಿ ದಂಡಕ್ಕೆ ಒಳಗಾಗಿದ್ದಾರೆ.

ಪಾಕಿಸ್ತಾನದ ಸಾಹಿಬ್‌ಜಾದಾ ಫರ್ಹಾನ್ ಅವರು ಅರ್ಧಶತಕದ ಬಳಿಕ ಬಂದೂಕು ಹಿಡಿದಂತೆ ಬ್ಯಾಟ್ ಹಿಡಿದು ಸಂಭ್ರಮಿಸಿದ್ದಕ್ಕಾಗಿ ಎಚ್ಚರಿಕೆ ಮತ್ತು ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಇದೇ ವೇಳೆ ಆರ್ಷದೀಪ್ ಸಿಂಗ್ ವಿರುದ್ಧದ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಲಿಲ್ಲ.

ಪಂದ್ಯದಲ್ಲಿ ಹಾರಿಸ್ ರೌಫ್ ಬೌಲರ್ ಔಟ್ ಮಾಡಿದ ನಂತರ ಪ್ರದರ್ಶಿಸಿದ ಸನ್ನೆಯನ್ನು ಭಾರತೀಯ ವೇಗಿ ಜಸ್ಪ್ರೀತ್ ಬುಮ್ರಾ ಸಹ ಬಳಿಕ ಮಾಡಿದ್ದು, ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ಶಿಕ್ಷೆ ವಿಧಿಸಲಾಗಿದೆ. 

ಕ್ರೀಡಾಂಗಣದಲ್ಲಿ ಶಿಸ್ತಿನ ಮಿತಿಯನ್ನು ಮೀರದಂತೆ ಎಲ್ಲಾ ಆಟಗಾರರಿಗೂ ಒಂದೇ ಮಾನದಂಡ ಅನ್ವಯವಾಗುತ್ತದೆ ಎಂಬ ಸಂದೇಶವನ್ನು ಐಸಿಸಿ ಈ ಕ್ರಮದ ಮೂಲಕ ನೀಡಿದೆ.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 2
Sad Sad 0
Wow Wow 0