ಗಂಟಲಲ್ಲಿ ಕಫ ಇದೆಯೇ! ಹಾಗಾದ್ರೆ ಇಲ್ಲಿದೆ ನೋಡಿ ಮನೆ ಮದ್ದು!

Nov 28, 2025 - 00:15
 0  2.2k
ಗಂಟಲಲ್ಲಿ ಕಫ ಇದೆಯೇ! ಹಾಗಾದ್ರೆ ಇಲ್ಲಿದೆ ನೋಡಿ ಮನೆ ಮದ್ದು!

💠 ಶುಂಠಿ ಪುಡಿ ಎರಡು ಚಮಚದಷ್ಟು 💠 ತುಳಸಿ ಪುಡಿ ಒಂದು ಚಮಚದಷ್ಟು 💠 ಏಲಕ್ಕಿ ಪುಡಿ ಕಾಲು ಚಮಚದಷ್ಟು 💠 ಲವಂಗದ ಪುಡಿ ಕಾಲು ಚಮಚದಷ್ಟು ಇವುಗಳನ್ನು ಚೆನ್ನಾಗಿ ಮಿಶ್ರ ಮಾಡಿ ಇಟ್ಟುಕೊಳ್ಳಿ. ನಂತರ ಬಾಣಲೆಗೆ 💠 ಬೆಲ್ಲ ನಾಲ್ಕು ಚಮಚದಷ್ಟು 💠 ತುಪ್ಪ ಒಂದು ಚಮಚದಷ್ಟು 💠 ನೀರು ಸ್ವಲ್ಪ ಹಾಕಿ ಒಂದು ಎಳೆ ಪಾಕ ಬರುವಷ್ಟು ಆದ ಮೇಲೆ ಈ ಮೇಲಿನ ಮಿಶ್ರಣ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಕೆಳಗಿಳಿಸಿ. ಸಣ್ಣ ಸಣ್ಣ ಉಂಡೆ ,( ಒಂದು ಒಟಾಣಿ ಕಾಳಿನ ಗಾತ್ರದಷ್ಟು ) ಮಾಡಿ ಇಟ್ಟುಕೊಳ್ಳಿ. ದಿನವೂ ಒಂದು ವಾರ ಬೆಳಿಗ್ಗೆ - ರಾತ್ರಿ ಒಂದೊಂದು ಉಂಡೆ ಬಾಯಲ್ಲಿ ಹಾಕಿ ಚೀಪುತ್ತಾ ರಸವನ್ನು ನಿಧಾನವಾಗಿ ನುಂಗುತ್ತಾ ಬನ್ನಿ. ಇದರಿಂದ ಗಂಟಲಲ್ಲಿ ತುಂಬಿದ ಕಫ ಕಡಿಮೆಯಾಗುವುದರ ಜೊತೆಗೆ, ಗಂಟಲು ಕೆರೆತ, ನೋವು, ಧ್ವನಿ ಬೀಳುವುದು ಕೂಡಾ ಕಡಿಮೆಯಾಗುತ್ತದೆ.

(ವನಿತಾ ಚಂದ್ರಮೋಹನ್ ಕುಶಾಲನಗರ)

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0