INTERNATIONAL

14 ಕೋಟಿ ರೂ. ಲಾಟರಿ ಗೆದ್ದಿದ್ದು ಯಾರಿಗೂ ಗೊತ್ತಾಗಬಾರದೆಂದು ಮಾಡಿದ್ದೇನು ಗೊತ್ತೇ!

admincoorgdaily

Photo credit: TV09

ಕಿಂಗ್ಸ್ಟನ್: ಭಾರಿ ಮೊತ್ತದ ಲಾಟರಿ ಗೆಲುವು ವ್ಯಕ್ತಿಯ ಭದ್ರತೆಗೆ ಸವಾಲಾಗುವ ಸಾಧ್ಯತೆ ಇರುವುದರಿಂದ, ತನ್ನ ಗುರುತು ಬಹಿರಂಗವಾಗದಂತೆ ಮುಖವಾಡ ಧರಿಸಿ ಲಾಟರಿ ಬಹುಮಾನ ಸ್ವೀಕರಿಸಿದ ಘಟನೆ ದಲ್ಲಿ ನಡೆದಿದೆ.

ಸುಮಾರು 158 ಮಿಲಿಯನ್ ಡಾಲರ್‌ (ಭಾರತೀಯ ರೂಪಾಯಿಯಲ್ಲಿ ಅಂದಾಜು 14,19,06,98,900 ರೂ.) ಮೊತ್ತದ ಲಾಟರಿ ಗೆದ್ದಿದ್ದ ಈ ವ್ಯಕ್ತಿ, ತನ್ನ ಕುಟುಂಬದವರಿಗೂ ಈ ವಿಚಾರ ತಿಳಿಯಬಾರದು ಎಂಬ ಉದ್ದೇಶದಿಂದ ಸಾರ್ವಜನಿಕವಾಗಿ ಗುರುತು ಮರೆಮಾಚಿಕೊಂಡು ಲಾಟರಿ ಆಯೋಜಕರ ಮುಂದೆ ಹಾಜರಾದನು.

ಲಾಟರಿ ಬಹುಮಾನ ಸ್ವೀಕರಿಸಿದ ನಂತರ ಮಾತನಾಡಿದ ಆತ, ಸ್ಪ್ಯಾನಿಷ್ ಕೋರ್ಟ್ ಹೋಟೆಲ್‌ನಲ್ಲಿ 54 ವಾರಗಳ ಕಾಲ ಕಾಯುವಿಕೆಯ ಬಳಿಕ ಹಣವನ್ನು ಪಡೆದಿರುವುದಾಗಿ ತಿಳಿಸಿದನು. ಈ ಅವಧಿಯಲ್ಲಿ ಅಪರಾಧ ಸಂಭವಿಸುವ ಸಾಧ್ಯತೆ ಬಗ್ಗೆ ಭಯ ಹಾಗೂ ಮಾನಸಿಕ ಒತ್ತಡ ಅನುಭವಿಸಿದ್ದಾಗಿ ಹೇಳಿದ್ದಾನೆ.

ಜಮೈಕಾದಲ್ಲಿ ದೊಡ್ಡ ಮೊತ್ತದ ಲಾಟರಿ ಗೆದ್ದವರು ಭದ್ರತಾ ಕಾರಣಗಳಿಂದ ತಮ್ಮ ಗುರುತನ್ನು ರಹಸ್ಯವಾಗಿಡುವುದು ಸಾಮಾನ್ಯ ಎಂದು ಹೇಳಲಾಗುತ್ತಿದೆ. ಈ ಘಟನೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಆತನ ಎಚ್ಚರಿಕೆಯ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.