ಚಿಕ್ಕ ಮಕ್ಕಳಿಗೆ ಚಿಕನ್ಪಾಕ್ಸ್(ವೆರಿಸಲ್ಲಾ) ಆದರೆ ಏನ್ಮಡಬೇಕು ಗೊತ್ತೇ!
ಅಮ್ಮ ಆದ ಮಕ್ಕಳಿಗೆ ಆಗಲಿ ದೊಡ್ಡವರಿಗಾಗಲಿ ನಂಜಿನ ಆಹಾರ ಪದಾರ್ಥಗಳನ್ನು ಕೊಡಬಾರದು. ಹೊಟ್ಟೆಯ ಒಳಗೆ ಕೂಡ ಅಮ್ಮ( ಚಿಕನ್ ಫಾಕ್ಸ್ ) ಇರುತ್ತದೆ ಆದ್ದರಿಂದ ದೊಡ್ಡವರಾದರೆ ಹೆಸರುಕಾಳು ಯಥೇಚ್ಛವಾಗಿ ಬಳಸಬೇಕು ಚುಕ್ಕಿ ಬಾಳೆಹಣ್ಣು ತಿನ್ನಬೇಕು ಎಳನೀರು ಕುಡಿಯಬೇಕು.
ಚಿಕ್ಕ ಮಕ್ಕಳಿಗೂ ಕೂಡ ಇದನ್ನು ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಸೇವಿಸಲು ಕೊಡಬೇಕು. ( ದೊಡ್ಡವರಿಗಾಗಲಿ ಮಕ್ಕಳಿಗಾಗಲಿ ಹೊಟ್ಟೆ ಒಳಗಿರುವ ತೊಂದರೆ ಹೊರಗೆ ಬಿದ್ದ ಮೇಲೆ ಚಿಕಿತ್ಸೆ ಮಾಡಬೇಕು )ತಾಯಿಯ ಹಾಲು ಕುಡಿಯುವ ಮಗುವಾದರೆ ತಾಯಿ ಇಂತಹ ಆಹಾರಗಳನ್ನು ತೆಗೆದುಕೊಳ್ಳಬೇಕು ನಂಜಿನ ಆಹಾರ ಪದಾರ್ಥ ತೆಗೆದುಕೊಳ್ಳದೆ ಕಟ್ಟುನಿಟ್ಟಿನಿಂದ ಇದ್ದರೆ ಮಗು ತಾಯಿಯ ಹಾಲು ಕುಡಿದಾಗ ಆ ಔಷಧೀಯ ಪ್ರಭಾವಗಳು ಮಗುವಿನ ಮೇಲೆ ಬೀರುತ್ತದೆ. ಅರಸಿನ ಕೊನೆಯನ್ನು ಬೇವಿನ ಸೊಪ್ಪಿನೊಂದಿಗೆ ಅರೆದು ಪೇಸ್ಟ್ ತಯಾರಿಸಿ ತಲೆಯಿಂದ ಕಾಲಿನವರೆಗೆ ಚೆನ್ನಾಗಿ ಹಚ್ಚಬೇಕು ಜೊತೆಗೆ ಹೊಟ್ಟೆಗೆ ಒಂದು ಚಮಚದಷ್ಟು ಕುಡಿಸಬೇಕು. ( ಖಾಲಿ ಹೊಟ್ಟೆಯಲ್ಲಿ ಪ್ರಕ್ರಿಯೆ ಮಾಡಿದರೆ ಪ್ರಭಾವ ಹೆಚ್ಚುತ್ತದೆ ) ಇದರಿಂದ ಗಾಯಗಳು ಮಾಯುತ್ತದೆ, ಜ್ವರ ಕಡಿಮೆಯಾಗಿ ಸಮಸ್ಯೆಯಿಂದ ಹೊರ ಬರಬಹುದು. ಮಾಂಸಹಾರ ಹಾಗೂ ಎಣ್ಣೆ ಜಿಡ್ಡು ಸಹ ಸೇವಿಸಬಾರದು.
(ಮಾಹಿತಿ:ವನಿತಾ ಚಂದ್ರ ಮೋಹನ್ ಕುಶಾಲನಗರ)