ಪಂಚರಾಜ್ಯ ಚುನಾವಣಾ ಫಲಿತಾಂಶ; ಗೋಣಿಕೊಪ್ಪಲು ನಗರ ಬಿಜೆಪಿ ಶಕ್ತಿ ಕೇಂದ್ರದಿಂದ ಸಂಭ್ರಮಾಚರಣೆ

May 5, 2026 - 11:03
 0  392
ಪಂಚರಾಜ್ಯ ಚುನಾವಣಾ ಫಲಿತಾಂಶ; ಗೋಣಿಕೊಪ್ಪಲು ನಗರ ಬಿಜೆಪಿ ಶಕ್ತಿ ಕೇಂದ್ರದಿಂದ ಸಂಭ್ರಮಾಚರಣೆ

ಗೋಣಿಕೊಪ್ಪ: ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಫಲಿತಾಂಶ ಕಂಡುಕೊಂಡ ಹಿನ್ನೆಲೆ ಗೋಣಿಕೊಪ್ಪಲು ನಗರ ಬಿಜೆಪಿ ಶಕ್ತಿಕೇಂದ್ರ ವತಿಯಿಂದ ಸಂಭ್ರಮಾಚರಣೆ ನಡೆಯಿತು. 

 ಶಕ್ತಿ ಕೇಂದ್ರದ ಪ್ರಮುಖ್ ಸುರೇಶ್ ರೈ ನೇತೃತ್ವದಲ್ಲಿ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ನಗರದ ಬಸ್ಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಿಸಿದರು. 

 ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುಮ್ಮಟ್ಟಿರ ಕಿಲನ್ ಗಣಪತಿ ಇದೊಂದು ಐತಿಹಾಸಿಕ ದಾಖಲೆಯಾಗಿದೆ. 15 ವರ್ಷಗಳ ಮಮತಾ ಬ್ಯಾನರ್ಜಿ ಸಾಮ್ರಾಜ್ಯ ಪಥನವಾಗಿ ಆ ನೆಲದಲ್ಲಿ ಹಿಂದುತ್ವ ಧ್ವಜ ಹಾರಾಡುತ್ತಿದೆ. ಕಮಿನ್ಯುಸ್ಟ್ ಆಡಳಿತದಲ್ಲಿದ್ದ ಪಶ್ಚಿಮ ಬಂಗಾಳ ಇಂದು ಮೋದಿ, ಷಾ ಜೋಡಿಯ ತಂತ್ರಗಾರಿಕೆಗೆ ಒಲಿದಿದೆ. ಇದು ದಶಕಗಳ ಕನಸ್ಸಾಗಿತ್ತು ಎಂದು ಹೇಳಿದರು. 

 ಪ್ರಮುಖರುಗಳಾದ ಸುಬ್ರಮಣಿ, ಕೊಣಿಯಂಡ ಬೋಜಮ್ಮ, ಚೈತ್ರ ಬಿ. ಚೇತನ್, ಚೇತನ್, ಪ್ರಭಾಕರ್ ನೆಲ್ಲಿತ್ತಾಯ, ದೀಪಕ್, ನೂರೇರ ರಂಜಿ, ಸುಬ್ರಮಣಿ, ಸುನೀಲ್ ರೈ, ಧನಲಕ್ಷ್ಮಿ, ವಿವೇಕ್, ರಾಜೇಶ್ ಕೆ, ಅಖಿಲ್, ಸಾಜಿ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0