SKSSF-GCC ಕೊಡಗಿನ ನೂತನ ಅಧ್ಯಕ್ಷರಾಗಿ ಹುಸೈನ್ ಫೈಝಿ ಬಜೆಗುಂಡಿ ಆಯ್ಕೆ

Jul 31, 2026 - 23:57
 0  2
SKSSF-GCC ಕೊಡಗಿನ ನೂತನ ಅಧ್ಯಕ್ಷರಾಗಿ ಹುಸೈನ್ ಫೈಝಿ ಬಜೆಗುಂಡಿ ಆಯ್ಕೆ

ದುಬೈ:SKSSF GCC ಕೊಡಗಿನ 2026–2028ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಗೂಗಲ್ ಮೀಟ್ ಮೂಲಕ ನಡೆದ ಸಾಮಾನ್ಯ ಸಭೆಯಲ್ಲಿ ರಚಿಸಲಾಯಿತು. GCC ರಾಷ್ಟ್ರಗಳ ವಿವಿಧ ಭಾಗಗಳಲ್ಲಿ ನೆಲೆಸಿರುವ ಕೊಡಗು ಜಿಲ್ಲೆಯ ಸದಸ್ಯರು ಸಭೆಯಲ್ಲಿ ಭಾಗವಹಿಸಿ ಸಂಘಟನೆಯ ಮುಂದಿನ ಕಾರ್ಯಯೋಜನೆ ಹಾಗೂ ಭವಿಷ್ಯದ ಚಟುವಟಿಕೆಗಳ ಕುರಿತು ಸಮಗ್ರವಾಗಿ ಚರ್ಚಿಸಿದರು.

 ಸಾಮಾನ್ಯ ಸಭೆಯು SKSSF ಕೊಡಗು ಜಿಲ್ಲಾ ಅಧ್ಯಕ್ಷರಾದ ಶುಹೈಬ್ ಫೈಝಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಫೀಕ್ ಬಾಖವಿ, SKSSF ರಾಜ್ಯ ಉಪಾಧ್ಯಕ್ಷ ತಮ್ಲೀಕ್ ದಾರಿಮಿ, ಹಾಗೂ GCCಯ ಹಿರಿಯ ನಾಯಕರಾದ ಜೈನುದ್ದೀನ್ ಮುಸ್ಲಿಯಾರ್ ಮತ್ತು ರಝಾಕ್ ಫೈಝಿ (ಎಡಪಾಲಂ) ಸಭೆಯಲ್ಲಿ ಭಾಗವಹಿಸಿ ಸಂಘಟನೆಯ ಬೆಳವಣಿಗೆಗೆ ಅಗತ್ಯವಾದ ಮಾರ್ಗದರ್ಶನ ಹಾಗೂ ಸಲಹೆಗಳನ್ನು ನೀಡಿದರು.

ಸಭೆಯಲ್ಲಿ ಕಳೆದ ಅವಧಿಯ ಕಾರ್ಯಚಟುವಟಿಕೆಗಳ ಪರಿಶೀಲನೆ ನಡೆಸಿ, ಸದಸ್ಯತ್ವ ವಿಸ್ತರಣೆ, ಸಂಘಟನಾ ಬಲವರ್ಧನೆ, ಧಾರ್ಮಿಕ ಶಿಕ್ಷಣ, ದಅ್ವಾ ಕಾರ್ಯಗಳು, ಸಮಾಜಸೇವಾ ಯೋಜನೆಗಳು, ಯುವಜನರ ಭಾಗವಹಿಸುವಿಕೆ, ಮಾಧ್ಯಮ ಚಟುವಟಿಕೆಗಳು ಹಾಗೂ GCCಯಲ್ಲಿರುವ ಕೊಡಗು ಮೂಲದ ಕನ್ನಡಿಗರನ್ನು ಇನ್ನಷ್ಟು ಸಂಘಟಿಸುವ ಕುರಿತು ಸುದೀರ್ಘ ಚರ್ಚೆ ನಡೆಯಿತು. ಸದಸ್ಯರು ತಮ್ಮ ಅಮೂಲ್ಯ ಅಭಿಪ್ರಾಯಗಳು ಹಾಗೂ ಸಲಹೆಗಳನ್ನು ಹಂಚಿಕೊಂಡರು.

ಸಭೆಯ ಅಂತ್ಯದಲ್ಲಿ ನೂತನ ಕಾರ್ಯಕಾರಿ ಸಮಿತಿಯ ಪಟ್ಟಿಯನ್ನು ಸರ್ವಾನುಮತದಿಂದ ಅಂತಿಮಗೊಳಿಸಲಾಯಿತು. ಬಳಿಕ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಮುಶಾವರಾ ಸದಸ್ಯರು ಹಾಗೂ ಕೊಡಗು ನಾಇಬ್ ಖಾಝಿಯಾದ ಅಬ್ದುಲ್ಲಾ ಫೈಝಿ ಉಸ್ತಾದ್ ಅವರು ನೂತನ ಕಾರ್ಯಕಾರಿ ಸಮಿತಿಯನ್ನು ಅಧಿಕೃತವಾಗಿ ಘೋಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಬ್ದುಲ್ಲಾ ಫೈಝಿ ಉಸ್ತಾದ್ ಅವರು, ಹುದ್ದೆಗಳು ಗೌರವದ ಸಂಕೇತವಲ್ಲ, ಬದಲಾಗಿ ಸಮಾಜ ಮತ್ತು ಸಂಘಟನೆಗೆ ಸೇವೆ ಸಲ್ಲಿಸುವ ಅಮಾನತ್ ಎಂದು ತಿಳಿಸಿದರು. ಸಮಸ್ತ ಅಹ್ಲುಸ್ಸುನ್ನತ್ ವಲ್ ಜಮಾಅತ್‌ನ ಆದರ್ಶಗಳನ್ನು ಎತ್ತಿಹಿಡಿದು, ಒಗ್ಗಟ್ಟು, ಇಖ್ಲಾಸ್ ಹಾಗೂ ಸೇವಾ ಮನೋಭಾವದೊಂದಿಗೆ ಕಾರ್ಯನಿರ್ವಹಿಸುವಂತೆ ನೂತನ ಸಮಿತಿಗೆ ಕರೆ ನೀಡಿದರು.

 2026–2028ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ, ಸಲಹಾ ಸಮಿತಿ ಸದಸ್ಯರಾಗಿ ಜೈನುದ್ದೀನ್ ಮುಸ್ಲಿಯಾರ್, ರಝಾಕ್ ಫೈಝಿ ಹಾಗೂ ಶಫೀಕ್ ನೆಲ್ಲಿಹುದಿಕೇರಿ ಆಯ್ಕೆಯಾದರು. ಅಧ್ಯಕ್ಷರಾಗಿ ಹುಸೈನ್ ಫೈಝಿ ಬಜೆಗುಂಡಿ, ಉಪಾಧ್ಯಕ್ಷರಾಗಿ ಕಮರುದ್ದೀನ್ ಅಝ್ಹರಿ, ಯಾಹ್ಯಾ ಕೊಡ್ಲಿಪೇಟೆ ಪ್ರಧಾನ ಕಾರ್ಯದರ್ಶಿಯಾಗಿ ಬಶೀರ್ ಚೇರಂಬಾಣೆ, ಕಾರ್ಯದರ್ಶಿಗಳಾಗಿ ರಹೀಮ್ ಕುಶಾಲನಗರ, ಸಫ್ವಾನ್ ಚಾಮಿಯಾಲ ಸಂಘಟನಾ ಕಾರ್ಯದರ್ಶಿಯಾಗಿ ಅಶ್ರಫ್ ಅಝ್ಹರಿ ಕೊಂಡಂಗೇರಿ, ಕಾರ್ಯಕಾರಿ ಕಾರ್ಯದರ್ಶಿಯಾಗಿ ಅಪ್ಸರ್ ಮಡಿಕೇರಿ, ಖಜಾಂಚಿಯಾಗಿ ರಹೀಮ್ ಪೊನ್ನಂಪೇಟೆ, ದಅ್ವಾ ವಿಂಗ್ ಜುನೈದ್ ಬಜೆಗುಂಡಿ, ನಝೀರ್ ದಾರಿಮಿ ಚಾಮಿಯಾಲ, ಮೀಡಿಯಾ ವಿಂಗ್ ರಶೀದ್ ಇ.ಪಿ. ತ್ಯಾಗತೂರು, ವಿಕಾಯ ವಿಂಗ್ ಲತೀಫ್ ಕಡಂಗ, ಸಹಚಾರೆ ವಿಂಗ್ ನವಾಝ್ ಎಡಪಾಲಂ, ಸದಸ್ಯರಾಗಿ ಅಶ್ಫಾಕ್ ಕೊಡ್ಲಿಪೇಟೆ, ಗಫೂರ್ ಲತೀಫಿ, ಹಮ್ಜ ದಾರಿಮಿ, ನಿಜಾಂ ಎಡಪಾಲಂ, ರಫೀಕ್ ಕುಂಜಿಲ ಹಾಗೂ ಉಮ್ಮರ್ ದಾರಿಮಿ ಆಯ್ಕೆಯಾಗಿದ್ದಾರೆ.

ಸಭೆಯಲ್ಲಿ ನೂತನ ಸಮಿತಿಯು GCC ರಾಷ್ಟ್ರಗಳಲ್ಲಿರುವ ಕೊಡಗು ಜಿಲ್ಲೆಯ ಸಮಸ್ತ ಕಾರ್ಯಕರ್ತರನ್ನು ಒಗ್ಗೂಡಿಸಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಸೇವಾ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ವಿಸ್ತರಿಸುವ ಸಂಕಲ್ಪ ವ್ಯಕ್ತಪಡಿಸಿತು. ಸದಸ್ಯತ್ವ ಅಭಿಯಾನ, ಇಸ್ಲಾಮಿಕ್ ಅಧ್ಯಯನ ಕಾರ್ಯಕ್ರಮಗಳು, ಸಮಾಜಮುಖಿ ಸೇವೆಗಳು, ಯುವಜನರಿಗೆ ನಾಯಕತ್ವ ತರಬೇತಿ, ಮಾಧ್ಯಮ ಚಟುವಟಿಕೆಗಳು ಹಾಗೂ ಡಿಜಿಟಲ್ ವೇದಿಕೆಗಳ ಮೂಲಕ ಸಂಘಟನೆಯ ಕಾರ್ಯಗಳನ್ನು ಇನ್ನಷ್ಟು ಜನರಿಗೆ ತಲುಪಿಸಲು ನಿರ್ಧರಿಸಲಾಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0