SKSSF GCC ಕೊಡಗು ವತಿಯಿಂದ ಸೆಪ್ಟೆಂಬರ್ 6ರಂದು ಮದೀನಾ ಫ್ಯಾಷನ್’ ಕಾರ್ಯಕ್ರಮ

Aug 31, 2026 - 18:34
 0  71
SKSSF GCC ಕೊಡಗು ವತಿಯಿಂದ ಸೆಪ್ಟೆಂಬರ್ 6ರಂದು ಮದೀನಾ ಫ್ಯಾಷನ್’ ಕಾರ್ಯಕ್ರಮ

ದುಬೈ: SKSSF GCC ಕೊಡಗು ವತಿಯಿಂದ “ರಹ್ಮತ್‌ನ ಪ್ರತಿಧ್ವನಿ ಬದುಕಿನ ಬೆಳಕಿನ ಹಾದಿಯಲ್ಲಿ…” ಎಂಬ ಧ್ಯೇಯವಾಕ್ಯದೊಂದಿಗೆ ಮೀಲಾದ್ ಅಭಿಯಾನದ ಅಂಗವಾಗಿ ‘ಮದೀನಾ ಫ್ಯಾಷನ್’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಪ್ರವಾದಿ ಮುಹಮ್ಮದ್ ಅವರ ಪವಿತ್ರ ಜೀವನ, ಮಹಾನ್ ಸಂದೇಶ ಹಾಗೂ ಅವರ ಮೇಲಿನ ಪ್ರೀತಿ ಮತ್ತು ಸ್ವಲಾತ್‌ನೊಂದಿಗೆ ಆಯೋಜಿಸಲಾಗುತ್ತಿರುವ ಈ ಕಾರ್ಯಕ್ರಮವು 2026ರ ಸೆಪ್ಟೆಂಬರ್ 6ರಂದು ಭಾನುವಾರ ಸಂಜೆ 7 ಗಂಟೆಗೆ ದುಬೈನ ತಮ್ರ್ ಇನ್ ಹೋಟೆಲ್, ದೇರಾದಲ್ಲಿ ನಡೆಯಲಿದೆ.

ಪ್ರವಾದಿ ಅವರ ಜೀವನ ಸಂದೇಶವನ್ನು ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ಮೀಲಾದ್ ಅಭಿಯಾನವನ್ನು ನಡೆಸಲಾಗುತ್ತಿದೆ. ಪ್ರವಾದಿ (ಸ) ಅವರ ಮೇಲಿನ ಪ್ರೀತಿ, ಸ್ವಲಾತ್ ಹಾಗೂ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂದೇಶವನ್ನು ಸಾರುವ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಲು ಸಂಘಟಕರು ಸಿದ್ಧತೆ ನಡೆಸಿದ್ದಾರೆ.

ಯುಎಇಯ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ಕೊಡಗು ಜಿಲ್ಲೆಯ ಸಹೋದರರು, SKSSF GCC ಕೊಡಗು ಸದಸ್ಯರು, ಕಾರ್ಯಕರ್ತರು, ಕುಟುಂಬಸ್ಥರು ಹಾಗೂ ಮೀಲಾದ್ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು SKSSF GCC ಕೊಡಗು ಮನವಿ ಮಾಡಿದೆ. ಪ್ರವಾದ (ಸ) ಪ್ರೀತಿಯ ಬೆಳಕಿನಲ್ಲಿ ಒಂದು ಸುಂದರ ಸಂಗಮವಾಗಲಿರುವ ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಆತ್ಮೀಯ ಸ್ವಾಗತವನ್ನು ಕೋರಲಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0