ಮೇ 01ರಿಂದ 30ರವರೆಗೆ SKSSF GCC ಸದಸ್ಯತ್ವ ಅಭಿಯಾನ

ಮೇ 01ರಿಂದ 30ರವರೆಗೆ  SKSSF GCC ಸದಸ್ಯತ್ವ ಅಭಿಯಾನ

ದುಬೈ; SKSSF GCC ಮತ್ತು SKSSF ಕೊಡಗು ನಾಯಕರ ಸಂಯುಕ್ತ ಸಭೆ Zoom ಮೂಲಕ ದಿನಾಂಕ 19-04-2026 ರಂದು ರಾತ್ರಿ 8:30ಕ್ಕೆ ಆನ್‌ಲೈನ್‌ನಲ್ಲಿ ಯಶಸ್ವಿಯಾಗಿ ನಡೆಯಿತು. ಸಂಘಟನೆಯ ಬಲವರ್ಧನೆ ಹಾಗೂ ಸದಸ್ಯತ್ವ ವಿಸ್ತರಣೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ಸಭೆಯಲ್ಲಿ ಮುಂದಿನ ದಿನಗಳಲ್ಲಿ ಮೇ 1 ರಿಂದ ಮೇ 30ರವರೆಗೆ ಸದಸ್ಯತ್ವ ಅಭಿಯಾನವನ್ನು ನಡೆಸಲು ಏಕಮತದಿಂದ ನಿರ್ಧಾರ ಕೈಗೊಳ್ಳಲಾಯಿತು. ಅಭಿಯಾನದ ಉದ್ಘಾಟನಾ ಸಮಾರಂಭವನ್ನು ಮೇ 1ರಂದು ಜಿಲ್ಲಾ ಖಾಜಿ ಅಬ್ದುಲ್ಲ ಫೈಝಿ ಅವರು ನೆರವೇರಿಸಲಿದ್ದಾರೆ. ಎಲ್ಲಾ ಘಟಕಗಳು ಸಕ್ರಿಯವಾಗಿ ಭಾಗವಹಿಸಿ ಅಭಿಯಾನವನ್ನು ಯಶಸ್ವಿಯಾಗಿ ನಡೆಸಬೇಕು ಎಂದು ಸಭೆಯಲ್ಲಿ ಕರೆ ನೀಡಲಾಯಿತು.

ಸಭೆಯಲ್ಲಿ ತಮ್ಲೀಕ್ ದರೀಮಿ, ಶುಹೈಬ್ ಫೈಝಿ, ರಫೀಕ್ ಬಾಖವಿ, ಹುಸೈನ್ ಫೈಝಿ, ರಝಾಕ್ ಫೈಝಿ, ಯಹ್ಯಾ ಕೊಡ್ಲಿಪೇಟೆ, ರಹೀಮ್ ಮಲೇಶಿಯಾ, ಬಶೀರ್ ಚೇರಂಬಾಣೆ, ಕಮರುದ್ದೀನ್ ಅಝ್ಹರಿ, ಅಶ್ರಫ್ ಅಝ್ಹರಿ, ಜಂಶೀರ್ ವಾಫಿ, ಸಫ್ವಾನ್ ಚಾಮೆ, ಜುನೈದ್ ಬಜೆಗುಂಡಿ ಹಾಗೂ ಇತರರು ಉಪಸ್ಥಿತರಿದ್ದರು.