ಸಬ್ಜಾ ಅಥವಾ ಕಾಮ ಕಸ್ತೂರಿ ಬೀಜದಲ್ಲಿನ ಆರೋಗ್ಯ ಉಪಯೋಗಗಳು ಅಪಾರ

Aug 22, 2025 - 21:51
 0  908
ಸಬ್ಜಾ ಅಥವಾ ಕಾಮ ಕಸ್ತೂರಿ ಬೀಜದಲ್ಲಿನ ಆರೋಗ್ಯ ಉಪಯೋಗಗಳು ಅಪಾರ

(🖊️ವನಿತಾ ಚಂದ್ರಮೋಹನ್ ಕುಶಾಲನಗರ)

ಸಬ್ಜಾ (ಕಾಮ ಕಸ್ತೂರಿ) ಗುಣಗಳು... 💥

ಕಡಿಮೆ ಕಾರ್ಬೋಹೈಡ್ರೇಟ್ಸ್ ಅಧಿಕ ಪ್ರೊಟೀನ್ ಈ ಬೀಜದಲ್ಲಿದೆ. ಈ ರೀತಿಯ ಕಾಂಬಿನೇಷನ್‌ನ ಸಸ್ಯಾಹಾರ ಅಪರೂಪ. ಆದ್ದರಿಂದ ಇದನ್ನು ಆಹಾರಕ್ರಮದಲ್ಲಿ ಸೇರಿಸುವುದು ಅತ್ಯುತ್ತಮವಾಗಿದೆ. ಕಾಮ ಕಸ್ತೂರಿ ಬೀಜ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಒಮೆಗಾ 3 ಹಾಗೂ ಒಮೆಗಾ 6 ಕೊಬ್ಬಿನಂಶವಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ತೂಕ ಇಳಿಕೆಗೆ...

 ಎರಡು ಚಮಚ ಸಬ್ಜಾವನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಎರಡು ಚಮಚ ಸಬ್ಜಾದಲ್ಲಿ 40ಕ್ಯಾಲೋರಿ ಇದ್ದು 11 ಗ್ರಾಂ ಪ್ರೊಟೀನ್, 5 ಗ್ರಾಂ ಕಾರ್ಬೋಹೈಡ್ರೇಟ್ಸ್, 2 ಗ್ರಾಂ ನಾರಿನಂಶವಿರುವುದರಿಂದ ತೂಕ ಇಳಿಕೆಗೆ ಸರಿಯಾದ ವಸ್ತು ಇದಾಗಿದೆ. ಇದನ್ನು ಪ್ರತಿದಿನ ಬೆಳಗ್ಗೆ ತೆಗೆದುಕೊಳ್ಳುವುದರಿಂದ ಮೈ ಬೊಜ್ಜು ಕರಗುವುದು.

 ರೋಗ ನಿರೋಧಕ ಶಕ್ತಿ ಹೆಚ್ಚುವುದು....

 ಇದರಲ್ಲಿ ಫ್ಲೇವೋನಾಯ್ಡ್ ಅಂಶವಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಗಂಟಲು ಬೇನೆ ಇರುವವರು ಕಾಮಕಸ್ತೂರಿ ಎಲೆಗಳ ರಸವನ್ನು ಹಿಂಡಿ ಅದನ್ನು ಬಟ್ಟೆಯಲ್ಲಿ ಸೋಸಿ ಜೇನು ತುಪ್ಪ ಬೆರೆಸಿ ದಿನಕ್ಕೆ ಮೂರು ಬಾರಿ ಕುಡಿದರೆ ನೋವು ಕಡಿಮೆಯಾಗುವುದು. ಅಲ್ಲದೆ ಇದರ ಎಲೆಯ ಕಷಾಯ ಮಾಡಿ ಕುಡಿದರೆ ಶೀತ ಮತ್ತು ಜ್ವರ ಕೂಡ ಕಡಿಮೆಯಾಗುವುದು. ದೇಹವನ್ನು ತಂಪಾಗಿಡುತ್ತದೆ.. ಬೇಸಿಗೆಯ ಶಾಖ ನಿಯಂತ್ರಿಸುವಲ್ಲಿ ಇದು ತುಂಬಾ ಸಹಕಾರ

What's Your Reaction?

Like Like 6
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1