INTERNATIONAL

ಸೌದಿ ಅರೇಬಿಯಾದ ತಾಯಿಫ್ ಮೇಲೆ ಹೂತಿ ಡ್ರೋನ್ ದಾಳಿ: ಯೆಮನ್ ಪ್ರಜೆ ಸಾವು, ಹಲವರಿಗೆ ಗಾಯ

admincoorgdaily

 ಸೌದಿ ಅರೇಬಿಯಾದ ತಾಯಿಫ್ ಮೇಲೆ ಹೂತಿ ಡ್ರೋನ್ ದಾಳಿ: ಯೆಮನ್ ಪ್ರಜೆ ಸಾವು, ಹಲವರಿಗೆ ಗಾಯ
ಸೌದಿ ಅರೇಬಿಯಾ; ತಾಯಿಫ್ ನಗರದಲ್ಲಿ ಹೂತಿ ಬಂಡುಕೋರರು ನಡೆಸಿದ ಡ್ರೋನ್ ದಾಳಿಯಲ್ಲಿ ಒಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಮೃತಪಟ್ಟವರು ಯೆಮನ್ ಪ್ರಜೆ ಎಂದು ಗುರುತಿಸಲಾಗಿದೆ. ದಾಳಿಯಲ್ಲಿ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಪ್ರಜೆಗಳಿಗೆ ಗಂಭೀರ ಗಾಯಗಳಾಗಿವೆ.

ಸೌದಿ ರಕ್ಷಣಾ ಪಡೆಗಳು ಡ್ರೋನ್ ಅನ್ನು ಪ್ರತಿರೋಧಿಸುವಾಗ ಅದು ಕೆಳಗೆ ಬಿದ್ದು ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಘಟನಾ ಸ್ಥಳದಲ್ಲಿ ಅಗ್ನಿಶಾಮಕ ದಳ ಹಾಗೂ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.