SKSSF GCC ಕೊಡಗು ಅಧ್ಯಕ್ಷರಾಗಿ ಹುಸೈನ್ ಫೈಝಿ ಬಜೆಗುಂಡಿ ಆಯ್ಕೆ - ಪ್ರಧಾನ ಕಾರ್ಯದರ್ಶಿಯಾಗಿ ಬಶೀರ್ ಚೇರಂಬಾಣೆ
admincoorgdaily

ದುಬೈ: SKSSF GCC ಕೊಡಗು ಘಟಕದ 2026-2028ನೇ ಸಾಲಿನ ನೂತನ ಅಧ್ಯಕ್ಷರಾಗಿ *ಹುಸೈನ್ ಫೈಝಿ ಬಜೆಗುಂಡಿ* ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ *ಬಶೀರ್ ಚೇರಂಬಾಣೆ* ಆಯ್ಕೆಯಾಗಿದ್ದಾರೆ.
ಗೂಗಲ್ ಮೀಟ್ ಮೂಲಕ ನಡೆದ ಸಾಮಾನ್ಯ ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿ ರಚನೆ ಮಾಡಲಾಯಿತು. SKSSF ಕೊಡಗು ಜಿಲ್ಲಾ ಅಧ್ಯಕ್ಷ ಶುಐಬ್ ಫೈಝಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ತಮ್ಲೀಕ್ ದಾರಿಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಫೀಕ್ ಬಾಖವಿ, GCC ಹಿರಿಯ ನಾಯಕರಾದ ಜೈನುದ್ದೀನ್ ಮುಸ್ಲಿಯಾರ್, ರಝಾಕ್ ಫೈಝಿ (ಎಡಪಾಲಂ) ಮಾರ್ಗದರ್ಶನ ನೀಡಿದರು.
ಕೊಡಗು ನಾಇಬ್ ಖಾಝಿ ಮತ್ತು ಸಮಸ್ತ ಮುಶಾವರಾ ಸದಸ್ಯ ಅಬ್ದುಲ್ಲಾ ಫೈಝಿ ಉಸ್ತಾದ್ ಅವರು ನೂತನ ಸಮಿತಿಯನ್ನು ಘೋಷಿಸಿ, ಹುದ್ದೆಗಳು ಗೌರವವಲ್ಲ, ಸೇವೆಯ ಅಮಾನತ್ ಎಂದು ಕರೆ ನೀಡಿದರು.
*ನೂತನ ಸಮಿತಿ:*
*ಅಧ್ಯಕ್ಷರು:* ಹುಸೈನ್ ಫೈಝಿ (ಬಾಜೆಗುಂಡಿ)
*ಉಪಾಧ್ಯಕ್ಷರು:* ಕಮರುದ್ದೀನ್ ಅಝ್ಹರಿ, ಯಾಹ್ಯಾ (ಕೊಡ್ಲಿಪೇಟೆ)
*ಪ್ರಧಾನ ಕಾರ್ಯದರ್ಶಿ:* ಬಶೀರ್ (ಚೆರಂಬಾಣೆ)
*ಕಾರ್ಯದರ್ಶಿಗಳು:* ರಹೀಮ್ (ಕುಶಾಲನಗರ), ಸಫ್ವಾನ್ (ಚಾಮೆ)
*ಸಂಘಟನಾ ಕಾರ್ಯದರ್ಶಿ:* ಅಶ್ರಫ್ ಅಝ್ಹರಿ (ಕೊಂಡಂಗೇರಿ)
*ಕಾರ್ಯಕಾರಿ ಕಾರ್ಯದರ್ಶಿ:* ಅಪ್ಸರ್ (ಮಡಿಕೇರಿ)
*ಖಜಾಂಚಿ:* ರಹೀಮ್ (ಪೊನ್ನಂಪೇಟೆ)
GCCಯಲ್ಲಿರುವ ಕೊಡಗು ಮೂಲದವರನ್ನು ಒಗ್ಗೂಡಿಸಿ ಧಾರ್ಮಿಕ, ಸಾಮಾಜಿಕ, ಸೇವಾ ಚಟುವಟಿಕೆಗಳನ್ನು ಮತ್ತಷ್ಟು ಸಕ್ರಿಯಗೊಳಿಸುವ ಸಂಕಲ್ಪವನ್ನು ನೂತನ ಸಮಿತಿ ವ್ಯಕ್ತಪಡಿಸಿದೆ.