ಕೊಡಗಿನ ಕುವರಿಗೆ ಅಂತರರಾಷ್ಟ್ರೀಯ ಗರಿ: ಸಿಂಗಾಪುರಕ್ಕೆ NCC ನಿಯೋಗದಲ್ಲಿ ಟಿ.ಶೆಟ್ಟಿಗೇರಿಯ ವೃಂದಾ ಬೋಜಮ್ಮ
admincoorgdaily

ಮಡಿಕೇರಿ: ಟಿ.ಶೆಟ್ಟಿಗೇರಿ ನಿವಾಸಿ, ಮುಕ್ಕಾಟಿರ ನಂದ ಮುತ್ತಣ್ಣ ಮತ್ತು ಸುಮಿತ್ರಾ ಸಿ.ಎಂ. ಅವರ ಪುತ್ರಿ ಅಂಡರ್ ಆಫೀಸರ್ (UO) ವೃಂದಾ ಬೋಜಮ್ಮ ಎಂ.ಅವರು ಭಾರತವನ್ನು ಪ್ರತಿನಿಧಿಸಲು ಪ್ರತಿಷ್ಠಿತ NCC ಯೂತ್ ಎಕ್ಸ್‌ಚೇಂಜ್ ಪ್ರೋಗ್ರಾಮ್ (YEP) 2026 ಕ್ಕೆ ಆಯ್ಕೆಯಾಗಿದ್ದಾರೆ. ಈ ಕಾರ್ಯಕ್ರಮದಡಿ ಅವರು ಸಿಂಗಾಪುರಕ್ಕೆ ತೆರಳಲಿದ್ದಾರೆ.
2026ರ ಗಣರಾಜ್ಯೋತ್ಸವ ಶಿಬಿರದಲ್ಲಿ (RDC) ಅವರ ಅಸಾಧಾರಣ ಸಾಧನೆಯ ಹಿನ್ನೆಲೆಯಲ್ಲಿ ಈ ಆಯ್ಕೆ ನಡೆದಿದೆ. RDC ಶಿಬಿರದಲ್ಲಿ ವೃಂದಾ ಬೋಜಮ್ಮ ಅವರು ಮೋಟಿವೇಷನ್ ಹಾಲ್ ಸ್ಪೀಕರ್ ಆಗಿ ಸೇವೆ ಸಲ್ಲಿಸುವ ವಿಶಿಷ್ಟ ಗೌರವ ಪಡೆದಿದ್ದರು. ಜೊತೆಗೆ ಪ್ರತಿಷ್ಠಿತ ಪ್ರಧಾನ ಮಂತ್ರಿ ರ‍್ಯಾಲಿಯಲ್ಲಿ ಉತ್ತರಾಖಂಡ್ ಡೈರೆಕ್ಟರೇಟ್ ಅನ್ನು ಪ್ರತಿನಿಧಿಸಿದ್ದರು. ಹಾಗೂ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡುವ ಅಪರೂಪದ ಗೌರವಕ್ಕೂ ಪಾತ್ರರಾಗಿದ್ದರು.