HEALTH STORY

ತಲೆ ಕೆರೆಯುತ್ತಿದೆಯೇ? ಈ ಟಿಪ್ಸ್ ಫಾಲೋ ಮಾಡಿ

admincoorgdaily

ತಲೆ ಕೆರೆಯುತ್ತಿದೆಯೇ? ಈ ಟಿಪ್ಸ್ ಫಾಲೋ ಮಾಡಿ

ತಲೆಯಲ್ಲಿ ಡ್ಯಾಂಡ್ರಫ್ ( ಹೊಟ್ಟು) ಇದ್ದರೆ  ಕೆರೆತ ಉಂಟಾಗುತ್ತದೆ.. ಬಿಳಿ ಕೂದಲು ಪ್ರಾರಂಭವಾಗುವಾಗ ಕೂಡ ತಲೆಯಲ್ಲಿ ಕೆರೆತ ಉಂಟಾಗುತ್ತದೆ, ಕೂದಲಿಗೆ ಹಾಕುವ ಹೇರ್ ಡೈ  ವ್ಯತ್ಯಾಸದಿಂದ ಶಾಂಪೂವಿನ ವ್ಯತ್ಯಾಸದಿಂದ ಕೂಡ ಈ ರೀತಿ ತೊಂದರೆಯಾಗುತ್ತದೆ. ಹುಳಿ ಮೊಸರನ್ನು ತಲೆಗೆ ಹಚ್ಚುವುದರಿಂದ ಈ ಸಮಸ್ಯೆ ಕಡಿಮೆಯಾಗುತ್ತದೆ. ದಾಸವಾಳದ ಎಲೆ ಮತ್ತು ಹೂವಿನ ಪೇಸ್ಟ್ ತಲೆಗೆ ಹಚ್ಚಬಹುದು.

 ಅಲೋವೆರಾ ಜೊತೆಗೆ ಕರಿಬೇವು ಸೇರಿಸಿ ಮಿಕ್ಸಿ ಮಾಡಿ ತಲೆಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳಿಯಬಹುದು. ( ಕೆಲವರಿಗೆ ಅಲೋವೆರಾ ಹಾಕಿದರೆ ಕೆರೆತ ಉಂಟಾಗುತ್ತದೆ ಸ್ವಲ್ಪ ಅಲೋವೆರಾ ಪೇಸ್ಟನ್ನು ತಲೆಯ ಒಂದು ಸೈಡಿಗೆ ಹಾಕಿ ಪರೀಕ್ಷೆ ಮಾಡಿ ನಂತರ ಉಪಯೋಗಿಸಿ )ನೆನೆಸಿದ ಮೆಂತೆಯ ಪೇಸ್ಟ್ ಜೊತೆಗೆ ಎಗ್ ವೈಟ್ ತಲೆಗೆ ಹಚ್ಚುವುದು ಕೂಡ ಉತ್ತಮ ಫಲಿತಾಂಶ ಕೊಡುತ್ತದೆ. ಬಿಳಿ ಕೂದಲು ಹುಟ್ಟುವ ಸಮಯದಲ್ಲಿ ತಲೆ ಕೆರೆತ ಆಗುತ್ತಿದ್ದರೆ ಕೊಬ್ಬರಿ ಎಣ್ಣೆಯನ್ನು ಉಗುರು ಬೆಚ್ಚ ಮಾಡಿಕೊಂಡು ತಲೆಗೆ ಹಚ್ಚಿ ತಲೆಗೆ ಸ್ವಲ್ಪ ಬಿಸಿ ನೀರಿನ ಹಬೆ ತೆಗೆದುಕೊಳ್ಳಿ.

ಮಾಹಿತಿ:ವನಿತಾ ಚಂದ್ರಮೋಹನ್ ಕುಶಾಲನಗರ