ಅಂಗಡಿ ಮುಂದೆ ಕ್ಯೂ ನಿಲ್ಲೋದು ಬೇಡ:ಮೊಬೈಲ್ನಲ್ಲೇ ಮಾಡಬಹುದು ಪಡಿತರ ಚೀಟಿಗೆ ಇಕೆವೈಸಿ ; ಕೊಡಗು ಜಿಲ್ಲೆಯಲ್ಲಿ 1,43,845 ಮಂದಿಯ ಇ-ಕೆವೈಸಿ ಪೂರ್ಣ
K.M ISMAIL KANDAKKARE

(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ; ಪಡಿತರ ಚೀಟಿದಾರರ ಇಕೆವೈಸಿ ಸಮಸ್ಯೆಗೆ ಇದೀಗ ಮುಕ್ತಿ ಸಿಕ್ಕಿದ್ದು, ಇನ್ನು ಮನೆಯಲ್ಲೇ ಕುಳಿತು ಮೊಬೈಲ್ನಲ್ಲೇ ಇ-ಕೆವೈಸಿ ಮಾಡಿಕೊಳ್ಳಬಹುದು. ಅನ್ನಭಾಗ್ಯ ಸೇರಿದಂತೆ ಎಲ್ಲಾ ಪಡಿತರ ಯೋಜನೆಗಳ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಆಹಾರ ಇಲಾಖೆ ಅಭಿವೃದ್ಧಿಪಡಿಸಿರುವ ಅನ್ನ ಸೇವೆ’ ಮೊಬೈಲ್ ಆ್ಯಪ್ ಅ.14 ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಲಭ್ಯವಾಗಿದೆ.ಅ.1 ರಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರು ಬಿಡುಗಡೆ ಮಾಡಿದ್ದರು.
ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಉತ್ತರ ಕನ್ನಡ, ಬಳ್ಳಾರಿ, ಬೀದರ್, ಕೊಪ್ಪಳ ಸೇರಿ 8 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ಅ.1 ರಿಂದ 12 ರವರೆಗೆ ಈ 8 ಜಿಲ್ಲೆಗಳಲ್ಲಿ 1,60,267 ಮಂದಿ ಆ್ಯಪ್ ಮೂಲಕ ಯಶಸ್ವಿಯಾಗಿ ಇ-ಕೆವೈಸಿ ಮಾಡಿಸಿಕೊಂಡಿದ್ದಾರೆ.
ಬಹುತೇಕ ಫಲಾನುಭವಿಗಳು ಕಾರ್ಮಿಕ ವರ್ಗದವರು, ಕೆಲಸಕ್ಕಾಗಿ ಊರು ಬಿಟ್ಟು ನಗರಗಳಿಗೆ ವಲಸೆ ಹೋಗಿರುತ್ತಾರೆ. ಇ-ಕೆವೈಸಿಗಾಗಿ ಮತ್ತೆ ಊರಿಗೆ ಬಂದು, ನ್ಯಾಯಬೆಲೆ ಅಂಗಡಿ ಮುಂದೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಿತ್ತು. ಈ ಆ್ಯಪ್ ಬಂದ ಮೇಲೆ ಗೂಗಲ್ ಪ್ಲೇ ಸ್ಟೋರ್ನಿಂದ ‘ಅನ್ನ ಸೇವೆ’ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಎಲ್ಲಿಂದಲಾದರೂ ಇ.ಕೆವೈಸಿ ಮಾಡಬಹುದಾಗಿದೆ.
ಇ.ಕೆವೈಸಿ ಮಾಡಲು ಅ.20 ಕೊನೆಯ ದಿನವಾಗಿದೆ.
ಕೊಡಗು ಜಿಲ್ಲೆಯಲ್ಲಿ ಇ-ಕೆವೈಸಿ ಶೇ.72ರಷ್ಟು ಪ್ರಗತಿ;
ಕೊಡಗು ಜಿಲ್ಲೆಯ ಪಡಿತರ ಚೀಟಿದಾರರ ಇ-ಕೆವೈಸಿ ಪ್ರಗತಿ ಅ.12ರ ವರೆಗೆ ಶೇ.72 ತಲುಪಿದೆ.
ಜಿಲ್ಲೆಯ ಒಟ್ಟು 1,99,801 ಸದಸ್ಯರ ಪೈಕಿ 1,43,845 ಮಂದಿಯ ಇ-ಕೆವೈಸಿ ಪೂರ್ಣಗೊಂಡಿದ್ದು, 55,956 ಮಂದಿ ಬಾಕಿ ಇದ್ದಾರೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ 44,408 ಸದಸ್ಯರ ಪೈಕಿ 34,208 ಮಂದಿಯ ಕೆವೈಸಿ ಪೂರ್ಣಗೊಂಡಿದೆ.
ಸೋಮವಾರಪೇಟೆ ತಾಲೂಕಿನಲ್ಲಿ ಒಟ್ಟು 44,408 ರಲ್ಲಿ 34,208 ಪೂರ್ಣಗೊಂಡಿದ್ದು,10,200 ಮಂದಿಯ ಇಕೆವೈಸಿ ಬಾಕಿ ಇದೆ. ಕುಶಾಲನಗರ ತಾಲ್ಲೂಕಿನ 41,998 ರಲ್ಲಿ 31,644 ಪೂರ್ಣಗೊಂಡಿದ್ದು, 10,354 ಬಾಕಿ ಇದೆ.ಮಡಿಕೇರಿ ತಾಲ್ಲೂಕಿನ 46,405 ರಲ್ಲಿ 33,650 ಪೂರ್ಣಗೊಂಡಿದ್ದು, 12,755 ಬಾಕಿ ಇದೆ.ವಿರಾಜಪೇಟೆ 37,930 ರಲ್ಲಿ 25,275 ಪೂರ್ಣಗೊಂಡಿದ್ದು, 12,655 ಬಾಕಿ ಇದೆ. ಪೊನ್ನಂಪೇಟೆ ತಾಲ್ಲೂಕಿನಲ್ಲಿ 29,060 ರಲ್ಲಿ 19,068 ಪೂರ್ಣಗೊಂಡಿದ್ದು 9,992 ಬಾಕಿ ಇದೆ.
ಜಿಲ್ಲೆಯ 176 ನ್ಯಾಯಬೆಲೆ ಅಂಗಡಿಗಳಲ್ಲಿ ಶೇಕಡಾ 70% ಕ್ಕಿಂತ ಹೆಚ್ಚು ಮಂದಿಯ ಇಕೆವೈಸಿ ಪೂರ್ಣಗೊಂಡದೆ.51% ರಿಂದ 70% ರಷ್ಟು ಇಕೆವೈಸಿ ಪೂರ್ಣಗೊಳಿಸಿದ 84 ಅಂಗಡಿಗಳು ಇದ್ದು, 21% ರಿಂದ 50%ವರೆಗೆ 14 ನ್ಯಾಯ ಬೆಲೆ ಅಂಗಡಿಗಳು ಇಕೆವೈಸಿ ಪೂರ್ಣಗೊಳಿಸಿದೆ.
ಕೊಡಗು ಜಿಲ್ಲೆಯಲ್ಲಿ ಪಡಿತರ ಚೀಟಿ ಇ.ಕೆವೈಸಿ ಶೇಕಡಾ 70% ರಷ್ಟು ಪೂರ್ಣಗೊಂಡಿದೆ.ಇದೀಗ ಅಕ್ಟೋಬರ್ 14ರಿಂದ ಅನ್ನ ಸೇವೆ ಆ್ಯಪ್ ಮೂಲಕ ಗ್ರಾಹಕರಿಗೆ ತಮ್ಮ ಮೊಬೈಲ್ ನಲ್ಲೇ ಇಕೆವೈಸಿ ಮಾಡಬಹುದಾಗಿದೆ.
ಕೊಡಗು ಜಿಲ್ಲೆಯಲ್ಲಿ ಅ.20ರೊಳಗೆ ಸಂಪೂರ್ಣವಾಗಿ ಇಕೆವೈಸಿ ಪೂರ್ಣಗೊಳ್ಳಲಿದೆ.
ರಮ,ಪ್ರಬಾರ ಜಂಟಿ ನಿರ್ದೇಶಕರು ಆಹಾರ ಇಲಾಖೆ ಕೊಡಗು ಜಿಲ್ಲೆ
ಮನೆಯಲ್ಲೇ ಕುಳಿತು ಪಡಿತರ e-KYC ಮಾಡುವುದು ಹೇಗೆ?
ಮೊದಲು ಪ್ಲೇ ಸ್ಟೋರ್ನಿಂದ ‘ಅನ್ನ ಸೇವಾ’ ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳಿ,
ಆ್ಯಪ್ ಒಳಗೆ ಸೂಚಿಸುವ ಎಲ್ಲಾ ಪೂರಕ ಆ್ಯಪ್ಗಳನ್ನು ಸಹ ಇನ್ಸ್ಟಾಲ್ ಮಾಡಿ,
ಆ್ಯಪ್ ತೆರೆದು ನಿಮ್ಮ ಜಿಲ್ಲೆ, ಪಡಿತರ ಚೀಟಿ ಸಂಖ್ಯೆ ಹಾಗೂ ಕುಟುಂಬದ ಮುಖ್ಯಸ್ಥರ ಮೊಬೈಲ್ ಸಂಖ್ಯೆ ನಮೂದಿಸಬೇಕು.
ನಂತರ ನಿಮ್ಮ ಮೊಬೈಲ್ಗೆ ಬರುವ OTP ನಮೂದಿಸಬೇಕು.
ಬಳಿಕ ಪಡಿತರ ಚೀಟಿಯ ವಿವರಗಳು, ಯಾರಿಗೆ e-KYC ಬಾಕಿ ಇದೆ ಮತ್ತು ಯಾರಿಗೆ ಪೂರ್ಣಗೊಂಡಿದೆ ಎಂಬ ಪಟ್ಟಿ ಕಾಣಿಸುತ್ತದೆ. ಬಾಕಿ ಇರುವ ಸದಸ್ಯರ ಆಧಾರ್ ಲಿಂಕ್ ಮೊಬೈಲ್ ಸಂಖ್ಯೆ ಹಾಕಿ, ಮುಖದ ಫೋಟೋ (Face Capture) ಸೆರೆಹಿಡಿಯುವ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಬೇಕು.
ಪ್ರಕ್ರಿಯೆ ಯಶಸ್ವಿಯಾದರೆ ನಿಮ್ಮ ಮೊಬೈಲ್ಗೆ SMS ಬರುತ್ತದೆ.
ಅಕ್ಟೋಬರ್ 20 e-KYCಗೆ ಕೊನೆಯ ದಿನವಾಗಿದ್ದು, ಆ್ಯಪ್ನಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಇಲ್ಲ. ನಿಗದಿತ ಹಂತಗಳನ್ನು ಅನುಸರಿಸಿ ಕೆವೈಸಿ ಪೂರ್ಣಗೊಳಿಸುವಂತೆ ಆಹಾರ ಇಲಾಖೆ ಮನವಿ ಮಾಡಿದೆ.