ಕೊಡಗಿನಲ್ಲಿ ಐದು ಮತಗಟ್ಟೆಗಳಿಗಿಲ್ಲ ಎಸ್ಐಆರ್ ನೋಟಿಸ್:567 ಬೂತ್ ಗಳ ಪೈಕಿ 562 ಬೂತ್ ಗಳ ಮತದಾರರಿಗೆ ನೋಟೀಸ್ ಜಾರಿ
admincoorgdaily

ಮಡಿಕೇರಿ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್)ಪ್ರಕ್ರಿಯೆಯ ಎರಡನೇ ಹಂತ ನಡೆಯುತ್ತಿದ್ದು,ಲಾಜಿಕಲ್ ಡಿಸ್ಕ್ರಿಪೆನ್ಸಿ ಹಾಗೂ ನೋ ಮ್ಯಾಪಿಂಗ್ ಅಡಿಯಲ್ಲಿ ಗುರುತಿಸಲಾಗಿರುವ ಕೊಡಗಿನ 58,883 ಮತದಾರರಿಗೆ ನೋಟಿಸ್ ನೀಡಿ,ವಿಚಾರಣೆ ನಡೆಸಲಾಗುತ್ತಿದೆ.
ಜಿಲ್ಲೆಯ ಮಡಿಕೇರಿ ಹಾಗೂ ವಿರಾಜಪೇಟೆ ಸೇರಿ 567 ಮತಗಟ್ಟೆಗಳಿದ್ದು,ಇದರಲ್ಲಿ ಕೇವಲ 5 ಮತಗಟ್ಟೆಗಳ ಮತದಾರರು ಮಾತ್ರ ನೋಟಿಸ್ ಪ್ರಕ್ರಿಯೆಯಿಂದ ಬಚಾವಾಗಿದ್ದಾರೆ.ಉಳಿದ
562 ಮತಗಟ್ಟೆಗಳಲ್ಲಿ ಕೂಡ ಕನಿಷ್ಠ 1 ರಿಂದ 10 ಮತದಾರರಿಗೆ ನೋಟೀಸ್ ವಿತರಣೆಯಾಗಿದೆ.ಮಡಿಕೇರಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 154,155, ಹಾಗೂ 247, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 9 ಹಾಗೂ 73 ಬೂತ್ ಸಂಖ್ಯೆಯ ಮತದಾರರಿಗೆ ಯಾವುದೇ ನೋಟಿಸ್ ವಿತರಣೆಯಾಗಿಲ್ಲ.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 247 ಕಂಡಕರೆಯಲ್ಲಿ ಯಾವುದೇ ಮತದಾರರಿಗೆ ನೋಟೀಸ್ ಜನರೇಟ್ ಆಗಿಲ್ಲ.ಇಲ್ಲಿ 780 ಮತದಾರರು ಎಸ್ಐಆರ್ ಕರಡು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಕಂಡಕರೆ ಬೂತ್ ನಲ್ಲಿ ಎಸ್ಐಆರ್ ಮತದಾರರ ಕರಡು ಪಟ್ಟಿ ಪ್ರಕಟಗೊಳ್ಳುವ ಮೊದಲು 140ಕ್ಕೂ ಅಧಿಕ ಮತದಾರರ ಹೆಸರು ಲಾಜಿಕಲ್ ಡಿಸ್ಕ್ರಿಪೆನ್ಸಿ ಎಂದು ಬಿಎಲ್ಒ ಆ್ಯಪ್ ನಲ್ಲಿ ಪತ್ತೆಯಾಗಿತ್ತು.ಆದರೆ ಪತ್ರಕರ್ತ ಇಸ್ಮಾಯಿಲ್ ಕಂಡಕರೆ ಅವರು ಎಲ್ಲರಿಗಿಂತಲೂ ಮುಂಚಿತವಾಗಿ ಲಾಜಿಕಲ್ ಡಿಸ್ಕ್ರಿಪೆನ್ಸಿ ಬಗ್ಗೆ ಆಳವಾಗಿ ತಿಳಿದು,ಮತದಾರರಿಗೆ ತಾವೇ ಖುದ್ದಾಗಿ ಮಾಹಿತಿ ನೀಡಿದ್ದರು.ಬಿಎಲ್ಒ ಅವರೊಂದಿಗೆ ಸೇರಿ ಲಾಜಿಕಲ್ ಡಿಸ್ಕ್ರಿಪೆನ್ಸಿ ಸರಿಪಡಿಸಿದ್ದರು.ಇದರ ಬಗ್ಗೆ ಕೆಲವರಿಗೆ ಮಾಹಿತಿಯೇ ಇರಲಿಲ್ಲ.ಎಲ್ಲವನ್ನೂ ಇಸ್ಮಾಯಿಲ್ ಕಂಡಕರೆ ಅವರು ಬಿಎಲ್ಒ ನೆರವಿನಿಂದ
ಸರಿಪಡಿಸಿದ್ದರು.ಅದಲ್ಲದೇ ಕೆಲವು ಮತದಾರರಿಗೆ ಮ್ಯಾಪಿಂಗ್ ಮಾಹಿತಿ ಕೂಡ ಲಭ್ಯವಿರಲಿಲ್ಲ.ಅದನ್ನೂ ಕೂಡ ಸಂಗ್ರಹಿಸಿ ನೀಡಿದ್ದರು .ಇಸ್ಮಾಯಿಲ್ ಕಂಡಕರೆ ಅವರ ಪ್ರಯತ್ನ ಮತ್ತು ಬಿಎಲ್ಒ ಅವರ ಸಹಕಾರದಿಂದ ಕಂಡಕರೆ ಬೂತ್ ನಲ್ಲಿ ಮತದಾರರು ನೋಟಿಸ್ ಪ್ರಕ್ರಿಯಿಂದ ಪಾರಾಗಿದ್ದಾರೆ ಎಂದು ಮತದಾರರ ಸವಾದ್ ಉಸ್ಮಾನ್ ಅಭಿಪ್ರಾಯಪಟ್ಟಿದ್ದಾರೆ.
ಅದೇ ರೀತಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ 154 ಮದಲಾಪುರ ಮತಗಟ್ಟೆ (ಬ್ಯಾಡಗೊಟ್ಟ ವ್ಯಾಪ್ತಿಯ) ಮತದಾರರಿಗೂ ಕೂಡ ನೋಟಿಸ್ ಜಾರಿಯಾಗಿಲ್ಲ.
ಈ ಮತಗಟ್ಟೆಯಲ್ಲಿ 874 ಮತದಾರರು ಇದ್ದಾರೆ.
ಲಾಜಿಕಲ್ ಡಿಸ್ಕ್ರಿಪೆನ್ಸಿ ಎಂದು ಪ್ರತ್ಯೇಕಿಸಲಾಗಿದ್ದ ಮತದಾರರಿಗೆ ಮಾಹಿತಿ ನೀಡಿ ಎಲ್ಲವನ್ನೂ ಮೊದಲೇ ಸರಿಪಡಿಸಿದ್ದೆವು.ಆದ್ದರಿಂದ ಯಾರಿಗೂ ಕೂಡ ನೋಟೀಸ್ ಜಾರಿಯಾಗಿಲ್ಲ ಎಂದು ಮತಗಟ್ಟೆ ಅಧಿಕಾರಿ ಶಾಲಿನಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮದಲಾಪುರ 155 ಮತಗಟ್ಟೆ ಸಂಖ್ಯೆ (ಎಡ ಪಾರ್ಶ್ವ) ಮಲ್ಲೇನಳ್ಳಿ ಹಾಗೂ ಶಿರಹೊಳಲು ವ್ಯಾಪ್ತಿಯ ಮತದಾರರಿಗೆ ಕೂಡ ಎಸ್ಐಆರ್ ಪ್ರಕ್ರಿಯೆಯಲ್ಲಿ ಯಾವುದೇ ನೋಟಿಸ್ ಜಾರಿಯಾಗಿಲ್ಲ.ಈ ಮತಗಟ್ಟೆಯಲ್ಲಿ 793 ಮತದಾರರು ಇದ್ದಾರೆ.
ವಿರಾಜಪೇಟೆಯಲ್ಲಿ ಕೇವಲ ಎರಡು ಬೂತ್;
ಎಸ್ಐಆರ್ ಪ್ರಕ್ರಿಯೆಯಲ್ಲಿ ಲಾಜಿಕಲ್ ಡಿಸ್ಕ್ರಿಪೆನ್ಸಿ ಹಾಗೂ ನೋ ಮ್ಯಾಪಿಂಗ್ ಅಡಿಯಲ್ಲಿ ಪ್ರತ್ಯೇಕಿಸಲಾಗಿರುವ ಮತದಾರರ ಪೈಕಿ ವಿರಾಜಪೇಟೆ 282 ಬೂತ್ ಗಳಲ್ಲಿ ಕೇವಲ ಎರಡು ಬೂತ್ ಮತದಾರರಿಗೆ ಮಾತ್ರ ನೋಟೀಸ್ ಜಾರಿಯಾಗಿಲ್ಲ.
ಮತಗಟ್ಟೆ ಸಂಖ್ಯೆ 73 ಎಮ್ಮೆಮಾಡು(ಪಡಿಯಾನಿ) ಭಾಗದ ಮತದಾರರಿಗೆ ಯಾವುದೇ ನೋಟಿಸ್ ಜಾರಿಯಾಗಿಲ್ಲ.ಇಲ್ಲಿ 1165 ಮತದಾರರು ಇದ್ದಾರೆ.
ಮುಂಡ್ರೋಟ್ ಬೂತ್ ನಲ್ಲಿ ಕೇವಲ ಮೂರು ಮತದಾರರು;
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ ಮುಂಡ್ರೋಟ್ ಬೂತ್ ನಲ್ಲಿ ಕೇವಲ 3 ಮತದಾರರು ಮಾತ್ರ ಇದ್ದಾರೆ.ಇಲ್ಲಿ ಕೂಡ ಯಾವುದೇ ಮತದಾರರಿಗೆ ನೋಟಿಸ್ ಜಾರಿಯಾಗಿಲ್ಲ.ಎಸ್ಐಆರ್ ಪ್ರಕ್ರಿಯೆಗಿಂತ ಮುನ್ನ ಮುಂಡ್ರೋಟ್ ಅರಣ್ಯ ಭವನದಲ್ಲಿರುವ ಮತಗಟ್ಟೆಯಲ್ಲಿ ಒಟ್ಟು 39 ಮತದಾರರು ಇದ್ದರು.
39 ಮತದಾರರ ಪೈಕಿ ಇಬ್ಬರು ಮೃತಪಟ್ಟಿದ್ದು,34 ಮತದಾರರು ಕೇರಳಕ್ಕೆ ಸ್ಥಳಾಂತರಗೊಂಡಿದ್ದಾರೆ ಎಂದು ಮತಗಟ್ಟೆ ಅಧಿಕಾರಿ ಗಗನ್ ಅವರು ಹೇಳುತ್ತಾರೆ.
36 ಮಂದಿ ಮತದಾರರು ASDDO ಪಟ್ಟಿಯಲ್ಲಿ ಇದ್ದಾರೆ.
ಕೇವಲ ಮುಂಡ್ರೋಟ್ ಬೂತ್ ನಲ್ಲಿ 2 ಗಂಡು,1 ಹೆಣ್ಣು ಸೇರಿ ಕೇವಲ ಮೂರು ಮತದಾರರು ಮಾತ್ರ ಕರಡು ಪಟ್ಟಿಯಲ್ಲಿ ಹೆಸರು ಇರುವುದು.ಮುಂಡ್ರೋಟ್
ಕೊಡಗು ಜಿಲ್ಲೆಯಲ್ಲಿ ಅತೀ ಕಡಿಮೆ ಮತದಾರರು ಇರುವ ಏಕೈಕ ಬೂತ್.