ಕೊಡಗು ವಿಶ್ವವಿದ್ಯಾಲಯಕ್ಕೆ ಮೂರು ಹೆಸರು ಪ್ರಸ್ತಾಪ: ಕಾವೇರಿ, ಮಹಾರಾಜ ದೊಡ್ಡ ವೀರ ರಾಜೇಂದ್ರ, ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಸೇರಿ ಮೂರು ಹೆಸರುಗಳ ಪ್ರಸ್ತಾವನೆ ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಕೆ
K.M ISMAIL KANDAKKARE

(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ:ರಾಜ್ಯದಲ್ಲಿ 9 ವಿಶ್ವವಿದ್ಯಾಲಯಕ್ಕೆ ರಾಜ್ಯದ ಮಹನೀಯರ ಹೆಸರನ್ನು ನಾಮಕರಣ ಮಾಡುವ ನಿಟ್ಟಿನಲ್ಲಿ ಈಗಾಗಲೇ ಉನ್ನತ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕೊಡಗು ವಿಶ್ವವಿದ್ಯಾಲಯಕ್ಕೆ ಕಾವೇರಿ,ದೊಡ್ಡ ವೀರ ರಾಜೇಂದ್ರ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅವರು ಹೆಸರಿನ ಪ್ರಸ್ತಾವನೆಯನ್ನು ಸಲ್ಲಿಕೆಯಾಗಿದೆ.ರಾಜ್ಯದಲ್ಲಿ ಈಗಾಗಲೇ ಹಲವು ವಿಶ್ವವಿದ್ಯಾಲಯಕ್ಕೆ ಹಲವು ಮಹನೀಯರ ಹೆಸರನ್ನು ನಾಮಕರಣ ಮಾಡಲಾಗಿದೆ.
ಅದರೊಂದಿಗೆ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ಪ್ರಯತ್ನ ಕೂಡ ಆಗಲಿದೆ.
ಕರ್ನಾಟಕದಲ್ಲಿ ಅಕ್ಕಮಹಾದೇವಿ, ಕಿತ್ತೂರು ರಾಣಿ ಚೆನ್ನಮ್ಮ, ಸರ್ ಎಂ. ವಿಶ್ವೇಶ್ವರಯ್ಯ, ನೃಪತುಂಗ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ರಾಷ್ಟ್ರಕವಿ ಕುವೆಂಪು, ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್, ಮಹರ್ಷಿ ವಾಲ್ಮೀಕಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ವಿಜಯನಗರದ ಅರಸ ಶ್ರೀ ಕೃಷ್ಣದೇವರಾಯ ಅವರ ಹೆಸರಲ್ಲಿ ವಿಶ್ವವಿದ್ಯಾಲಯಗಳಿವೆ.
ಇದೀಗ 9 ವಿಶ್ವವಿದ್ಯಾಲಯಗಳಿಗೆ ಮಹನೀಯರ ಹೆಸರು ನಾಮಕರಣ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಪ್ರಸ್ತಾವನೆ ಸಲ್ಲಿಸಿರುವ ಎರಡು ಹೆಸರಿನಲ್ಲಿದೆ ಕಾಲೇಜು;
ಕೊಡಗು ವಿಶ್ವವಿದ್ಯಾಲಯದ ನೂತನ ಹೆಸರಿಗೆ ಪ್ರಸ್ತಾವನೆ ಸಲ್ಲಿಸಿರುವ ಕಾವೇರಿ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಹೆಸರಿನಲ್ಲಿ ಜಿಲ್ಲೆಯಲ್ಲಿ ಕಾಲೇಜು ಇದೆ.
ಮಡಿಕೇರಿಯಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಹಾಗೂ ವಿರಾಜಪೇಟೆ ಮತ್ತು ಪೊನ್ನಂಪೇಟೆಯಲ್ಲಿ ಕಾವೇರಿ ಹೆಸರಿನಲ್ಲಿ ವಿದ್ಯಾಸಂಸ್ಥೆಗಳು ಇದೆ.
ಮತ್ತೆ ಈ ಎರಡು ಹೆಸರಿನಲ್ಲಿ ಯಾವುದಾದರೂ ಒಂದನ್ನ ನಾಮಕರಣ ಮಾಡಿದೆ ಜನರಿಗೆ ಗೊಂದಲವುಂಟಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಮತ್ತೊಂದೆಡೆ ಪ್ರಸ್ತಾವನೆ ಸಲ್ಲಿಸಿರುವ ಮೂರು ಹೆಸರು ಕೂಡ ಸೂಕ್ತ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.
ಕೊಡಗಿನಲ್ಲಿ ಹುಟ್ಟಿ ಇಡೀ ದಕ್ಷಿಣ ಭಾರತಕ್ಕೆ ನೀರುಣಿಸುತ್ತಿರುವ ಜೀವ ನದಿ ಕಾವೇರಿ ಹೆಸರು ವಿಶ್ವವಿದ್ಯಾಲಯಕ್ಕೆ ಇಡಬೇಕೆಂಬ ಜನಾಭಿಪ್ರಾಯ ಹೆಚ್ಚಿಗೆ ಇದೆ.ಮತ್ತೊಂದೆಡೆ ಸ್ವತಂತ್ರ ಭಾರತದ ಮೊದಲ ದಂಡನಾಯಕ ಕೊಡಗಿನ ಹೆಮ್ಮೆಯ ಪುತ್ರ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅವರ ಹೆಸರು ಕೂಡ ವಿಶ್ವವಿದ್ಯಾಲಯಕ್ಕೆ ಸೂಕ್ತವಾಗಿದೆ.ಅದಲ್ಲದೇ ಕೊಡಗು ಸಾಮ್ರಾಜ್ಯಕ್ಕೆ ಅಪಾರ ಕೊಡುಗೆ ನೀಡಿರುವ ದೊಡ್ಡ
ವೀರರಾಜೇಂದ್ರ (1780–1809) ಹಾಲೇರಿ ರಾಜಮನೆತನದ 9ನೇ ದೊರೆಯಾಗಿದ್ದರು.
ಕೊಡಗು ಒಂದು ಸಂಸ್ಥಾನವಾಗಿ ಬೆಳೆಯುವುದಕ್ಕೆ ಮತ್ತು ಕೊಡಗಿನ ಪ್ರತ್ಯೇಕ ಅಸ್ತಿತ್ವಕ್ಕೆ ಅವರ ಕೊಡುಗೆ ಅಪಾರವಾಗಿದೆ.
ವೀರ-ರಾಜೇಂದ್ರಪೇಟೆ(ವಿರಾಜಪೇಟೆ) ಸ್ಥಾಪಿಸಿದ್ದರು .ಕಾವೇರಿ,ದೊಡ್ಡ ವೀರರಾಜೇಂದ್ರ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅವರು ಹೆಸರು ಈಗಾಗಲೇ ಉನ್ನತ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಹಿಂದೆ ರಾಜ್ಯದಲ್ಲಿ ವಿಶ್ವವಿದ್ಯಾಲಯಗಳ ನಾಮಕರಣ ವಿಷಯದಲ್ಲಿ ರಾಜಕೀಯ ಜಟಾಪಟಿ ಕೂಡ ನಡೆದಿತ್ತು.
ಕೊಡಗು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿರುವ ಮೂರು ಹೆಸರಿನಲ್ಲಿ ರಾಜಕೀಯವಾಗಿ ಯಾವುದೇ ಗುದ್ದಾಟ ನಡೆಯಲ್ಲ.
ಆದರೆ ಈ ಮೂರು ಹೆಸರಿನಲ್ಲಿ ಯಾವುದೇ ಸೂಕ್ತ ಎಂಬುದು ಉನ್ನತ ಶಿಕ್ಷಣ ಇಲಾಖೆಗೆ ನಿರ್ಧರಿಸಲಿದೆ.
ಕೊಡಗು ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಲು ಪ್ರಸ್ತಾವನೆ ಸಲ್ಲಿಸಿರುವ ಹೆಸರು ಹೊರತುಪಡಿಸಿ,ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಕೂಡ ನಾಮಕರಣ ಮಾಡಬಹುದಾಗಿದೆ.
ಅದಲ್ಲದೇ ಕೊಡಗು ಪ್ರತ್ಯೇಕ ರಾಜ್ಯವಾಗಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿ.ಎಂ ಪೂಣಚ್ಚ ಹಾಗೂ ಕೊಡಗು ಮೈಸೂರು ರಾಜ್ಯದೊಂದಿಗೆ ವೀಲಿನಗೊಂಡ ಬಳಿಕ ಕೊಡಗಿನಿಂದ ಮುಖ್ಯಮಂತ್ರಿಯಾಗಿರುವ ಏಕೈಕ ವ್ಯಕ್ತಿ ಗುಂಡೂರಾವ್ ಅವರು ಮಾತ್ರ. ಅವರ ಹೆಸರನ್ನು ಕೂಡ ವಿಶ್ವವಿದ್ಯಾಲಯ ನಾಮಕರಣ ಮಾಡಬಹುದಾಗಿದೆ.ಇದರ ಬಗ್ಗೆ ವಿಸ್ತ್ರತ ಚರ್ಚೆ ಅನಿವಾರ್ಯವಾಗಿದೆ.
---------------------------------------------------
ಈಗಾಗಲೇ ಮೂರು ಹೆಸರುಗಳು ಪ್ರಸ್ತಾವನೆಯನ್ನು ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಲಾಗಿದೆ.
ಮೂರು ಹೆಸರು ಕೂಡ ಕೊಡಗು ವಿವಿಗೆ ಸೂಕ್ತವಾಗಿದೆ. ಉನ್ನತ ಶಿಕ್ಷಣ ಇಲಾಖೆ ಹಾಗೂ ಸರ್ಕಾರ ಯಾವುದೇ ಹೆಸರು ನಾಮಕರಣ ಮಾಡಿದರು ಸ್ವಾಗತಿಸುತ್ತೇವೆ.
ಈಗಾಗಲೇ ಕಾವೇರಿ ಹೆಸರು ಸೂಕ್ತ ಎಂದು ಕೆಲವು ಮಂದಿ ಕರೆ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರೊ. ಅಶೋಕ ಸಂ ಆಲೂರ,
ಕೊಡಗು ವಿವಿ, ಕುಲಪತಿ