ಹುಲಿ ದಾಳಿಗೆ ಕರು ಬಲಿ

ಸಿದ್ದಾಪುರ :- ಹುಲಿ ದಾಳಿಗೆ ಒಂದುವರೆ ವರ್ಷದ ಕರು ಬಲಿಯಾಗಿರುವ ಘಟನೆ ಜಿಲ್ಲೆಯ ವಿರಾಜಪೇಟೆ ತಾಲೂಕಿನ ಚೆನ್ನಯ್ಯನ ಕೋಟೆ ಗ್ರಾಮದ ಕಾಫಿ ತೋಟದಲ್ಲಿ ನಡೆದಿದೆ.
ಗ್ರಾಮದ ಸಿ. ಟಿ. ಪೊನ್ನಪ್ಪ ಎಂಬುವರ ಮೇಯಲು ಬಿಟ್ಟ ಕರು ಹಸುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿದೆ.ಕಳೆದ ತಿಂಗಳ ಅಂತರದಲ್ಲಿ ಮಾಲ್ದಾರೆ,ಚೆನ್ನಯ್ಯನ ಕೋಟೆ , ಗ್ರಾಮ ವ್ಯಾಪ್ತಿಯಲ್ಲಿ ಐದು ಹಸುಗಳು ಹುಲಿ ದಾಳಿಗೆ ಬಲಿಯಾಗಿವೆ ಇದರಿಂದ ಸ್ಥಳೀಯರು ಜೀವಭಯದಲ್ಲಿ ಸಂಚಾರ ಮಾಡುವಂತಾಗಿದೆ.
ಹುಲಿಯನ್ನು ಶೀಘ್ರ ಸೆರೆ ಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ
ಈ ಭಾಗದಲ್ಲಿ ಹುಲಿಯ ಚಲನವಲನ ಪರಿಶೀಲಿಸಲು ಕ್ಯಾಮರಾ ಅಳವಡಿಸಲಾಗಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಶನಿವಾರವೂ ಕಾರ್ಯಾಚರಣೆ ನಡೆಯಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.
ಕಾರ್ಯಾಚರಣೆಯಲ್ಲಿ ಆರ್,ಎಫ್,ಒ, ಗಂಗಾಧರ್, ನೇತೃತ್ವದಲ್ಲಿ ಡಿಆರ್‌ಎಫ್‌ಒ ಶಶಿ,
ರಾಜೇಶ್, ವಾಚರ್ ಸುನೀಲ್,
ಆರ್‌ಆರ್‌ಟಿ ತಂಡದ ಶಂಕರ್,ಮುತ್ತ, ರಂಜಿತ್, ಭರತ್, ರೋಷನ್, ಪ್ರದೀಪ್, ಇದ್ದರು.
What's Your Reaction?






