ನಾಳೆ ಎಸ್.ಕೆ.ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್ ವತಿಯಿಂದ ಬಡ ಹೆಣ್ಣುಮಕ್ಕಳ ಸಾಮೂಹಿ ವಿವಾಹ ಕಾರ್ಯಕ್ರಮ ಹಾಗೂ ‌ಧಾರ್ಮಿಕ ಮತ ಪ್ರವಚನ

ನಾಳೆ ಎಸ್.ಕೆ.ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್ ವತಿಯಿಂದ ಬಡ ಹೆಣ್ಣುಮಕ್ಕಳ ಸಾಮೂಹಿ ವಿವಾಹ ಕಾರ್ಯಕ್ರಮ ಹಾಗೂ ‌ಧಾರ್ಮಿಕ ಮತ ಪ್ರವಚನ

ವಿರಾಜಪೇಟೆ (ಕಡಂಗ): ಎಸ್.ಕೆ ಎಸ್.ಎಸ್.ಎಫ್ ಮತ್ತು ಎಸ್.ವೈ ಎಸ್ ಕಡಂಗ ಶಾಖಾ ವತಿಯಿಂದ 3ನೇ ವರ್ಷದ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮ ಮತ್ತು ದಾರ್ಮಿಕ ಪ್ರಭಾಷಣ ಕಾರ್ಯಕ್ರಮವು ಏಪ್ರಿಲ್ 26ರಂದು(ನಾಳೆ) ಕಡಂಗ ಕೊಕ್ಕಂಡಬಾಣೆ ವಠಾರ ನಡೆಯಲಿದೆ.ಕಾರ್ಯಕ್ರಮದಲ್ಲಿ 5 ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ರಮ ನಡೆಸಿಕೊಡಲಾಗುತ್ತಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಉಪ ಖಾಜಿಗಳಾದ ಅಬ್ದುಲ್ಲಾ ಮುಸ್ಲಿಂಯಾರ್ ಎಡಪಾಲವರು ವಹಿಸಲಿದ್ದಾರೆ. ಮುಖ್ಯ ಭಾಷಣಗಾರರಾಗಿ ಖ್ಯಾತ ಭಾಷಣಗಾರ ನೌಶಾದ್ ಬಾಖವಿ ತಿರುವನಂತಪುರಂ ರವರು ಭಾಗವಹಿಸಲಿದಾರೆ. ಸೈಯದ್ ಮುಹಮ್ಮದ್ ಜಮಲುಲೈಲಿ ತಂಙಲ್ ಪ್ರಾರ್ಥನೆಗೆ ನೇತೃತ್ವ ನೀಡಲಿದ್ದಾರೆ.ವಿರಾಜಪೇಟೆ ಶಾಸಕರಾದ ಎ.ಎಸ್ ಪೊನ್ನಣ್ಣ ಹಾಗೂ ಹಲವು ರಾಜಕೀಯ, ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ ಎಂದು ಎಸ್ ಕೆ ಎಸ್ ಎಸ್ ಎಫ್ ಕಡಂಗ ಶಾಖಾ ಅಧ್ಯಕ್ಷರಾದ ಇಸ್ಹಾಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ:ನೌಫಲ್ ಕಡಂಗ