ಕಟ್ಟಡ ಅಥವಾ ಮನೆ ಬಾಡಿಗೆಗೆ ಒದಗಿಸಿ
ಮಡಿಕೇರಿ -ಮಡಿಕೇರಿ ನಗರದಲ್ಲಿ ಇಲಾಖಾ ವತಿಯಿಂದ ಕಾರ್ಯಾಚರಣೆಯಲ್ಲಿರುವ 100 ಸಂಖ್ಯಾಬಲವುಳ್ಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ, ಮಡಿಕೇರಿ ಟೌನ್ ಬಿಸಿಡಬ್ಲ್ಯೂಡಿ-2641 ಇಲ್ಲಿನ ವಿದ್ಯಾರ್ಥಿಗಳು ವಾಸಕ್ಕೆ ಸೂಕ್ತ ಮೂಲಭೂತ ಸೌಕರ್ಯವುಳ್ಳ ನೀರಿನ ವ್ಯವಸ್ಥೆ, ವಿದ್ಯುತ್, ಕಾಂಪೌಂಡು, ಶೌಚಾಲಯ, ಸ್ನಾನದ ಗೃಹಗಳ ವ್ಯವಸ್ಥೆ ಹೊಂದಿದ್ದು, ಕಟ್ಟಡಕ್ಕೆ ಸಂಬಂಧಿಸಿದಂತೆ ಮೂಲ ದಾಖಲೆಗಳಿರುವ ಸೂಕ್ತ ಕಟ್ಟಡ ಅಥವಾ ಮನೆ ಕೂಡಲೇ ಬಾಡಿಗೆಗೆ ಬೇಕಾಗಿದೆ. ಹೆಚ್ಚಿನ ಮಾಹಿತಿಗೆ ದೂ.ಸಂ.8762476790 ನ್ನು ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮೋಹನ್ ಕುಮಾರ್ ಅವರು ತಿಳಿಸಿದ್ದಾರೆ.