ಜನಪರ ಪ್ರೀಮಿಯರ್ ಲೀಗ್-3 ಕ್ರಿಕೆಟ್ ಗೆ ಆಟಗಾರರ ಆಯ್ಕೆ

Apr 20, 2025 - 08:18
 0  44
ಜನಪರ ಪ್ರೀಮಿಯರ್ ಲೀಗ್-3 ಕ್ರಿಕೆಟ್ ಗೆ ಆಟಗಾರರ ಆಯ್ಕೆ

ಸಿದ್ದಾಪುರ :-ಮಾಲ್ದಾರೆ ಜನಪರ ಕ್ರೀಡಾ ಮತ್ತು ಕಲಾ ಯುವಜನ ಸಂಘ ಇವರ ಆಶ್ರಯದಲ್ಲಿ ಜನಪರ ಪ್ರೀಮಿಯರ್ ಲೀಗ್-3 ಕ್ರಿಕೆಟ್ ಪಂದ್ಯಾವಳಿಗೆ 10 ಫ್ರಾಂಚೈಸಿಗಳಿಗೆ 100 ಕ್ಕೂ ಹೆಚ್ಚು ಆಟಗಾರರನ್ನು ಆಯ್ಕೆ ಮಾಡುವ ಹರಾಜು ಪ್ರಕ್ರಿಯೆ ಸಿದ್ದಾಪುರದ ಚರ್ಚೆ ಹಾಲ್ ಸಭಾಂಗಣದಲ್ಲಿ ನಡೆಯಿತು.

ಮಾಲ್ದಾರೆ, ಚೆನ್ನಯ್ಯನ ಕೋಟೆ, ಪಾಲಿಬೆಟ್ಟ, ಗ್ರಾಮದ 100ಕ್ಕೂ ಹೆಚ್ಚು ಕ್ರಿಕೆಟಿಗರು ಹರಾಜಿನಲ್ಲಿ ಭಾಗವಹಿಸಿದ್ದರು, ಪ್ರತಿ ಫ್ರಾಂಚೈಸಿ ತಮ್ಮ ಬಿಡ್ ಹಣದ ಆಧಾರದ ಮೇಲೆ 10 ರಿಂದ 11 ಆಟಗಾರರನ್ನು ಆಯ್ಕೆ ಮಾಡಿದೆ.

ಜನಪರ ಸಂಘದ ಅಧ್ಯಕ್ಷ ಭಾವ ಮಾಲ್ದಾರೆ ಮಾತನಾಡಿ ಮೇ 19,20,ರಂದು ಲೀಗ್‌ ಮಾದರಿಯ ಪಂದ್ಯಾಟ ಎರಡು ದಿನ ನಡೆಯಲಿದ್ದು ಎಲ್ಲಾ ಪಂದ್ಯಗಳು ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿವೆ ಹಾಗೂ ಕೊನೆಯ ದಿನ ಸಾಧಕರಿಗೆ ಸನ್ಮಾನ, ಹಲವಾರು ಕಾರ್ಯಕ್ರಮದ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು .

ಈ ಸಂದರ್ಭ ವಿರಾಜಪೇಟೆ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ರಜಿತ್ ಕುಮಾರ್ ,ಸಾಮಾಜಿಕ ಕಾರ್ಯಕರ್ತ ಮುಸ್ತಫಾ, 

 ಸಾಗರ್ ಸಂಘದ ಅಧ್ಯಕ್ಷ ರದೀಶ್, ಪ್ರಮುಖರಾದ ರವೀಂದ್ರ ಭಾವೆ, ಹಮೀದ್,ಜನಪರ ಸಂಘದ ಕಾರ್ಯದರ್ಶಿ ವಿನಿಲ್, ಮಾಜಿ ಅಧ್ಯಕ್ಷ ಅಂಟೋನಿ, ಮಂಜು, ಮುಂತಾದವರು ಹಾಜರಿದ್ದರು

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0