ಹಣ, ಹೆಂಡ ಹಂಚಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು;ಮಾದಾಪುರದಲ್ಲಿ ಬಸವರಾಜ ಬೊಮ್ಮಾಯಿ ಹೇಳಿಕೆ
admincoorgdaily

ಮಡಿಕೇರಿ ಮೇ 5; ಪಂಚ ರಾಜ್ಯಗಳ ಚುನಾವಣೆಗಳ ಪೈಕಿ 3 ರಾಜ್ಯಗಳಲ್ಲಿ ಬಿಜೆಪಿಯ ಅಬೂತಪೂವ೯ ಗೆಲವು ಸಾಧಿಸಿದ್ದು ಕನಾ೯ಟಕದಲ್ಲಿಯೂ 2028 ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲು ಪ್ರೇರಣೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಾದಾಪುರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಮೇ 9 ರಂದು ಚಿತ್ರದುಗ೯ದಲ್ಲಿ ಆಯೋಜಿತ ಯಡಿಯೂರಪ್ಪ ಅಭಿನಂದನೋತ್ಸವದ ಮೂಲಕ ಕನಾ೯ಟಕದಲ್ಲಿ ಬಿಜೆಪಿ ಚುನಾವಣಾ ರಣಕಹಳೆ ಊದಲಿದೆ ಎಂದು ಹೇಳಿದ ಬೊಮ್ಮಾಯಿ, ಆ ವಿಜಯೋತ್ಸವ ಕಾಂಗ್ರೆಸ್ ಸಕಾ೯ರದ ಪತನಕ್ಕೆ ದಿನಗಣನೆ ಪ್ರಾರಂಭಿಸಲಿದೆ ಎಂದರು.
15 ವಷ೯ಗಳ ಕಾಲ ಪಶ್ಚಿಮಬಂಗಾಳದಲ್ಲಿ ದುರಾಡಳಿತ ನಡೆಸಿದ್ದ ಮಮತಾ ಬ್ಯಾನಜಿ೯ಯ ಸವಾ೯ಧಿಕಾರವನ್ನು ಅಂತ್ಯಗೊಳಿಸಿದ ಮೋದಿ ಮತ್ತು ಅಮಿತ್ ಷಾ ಜೋಡಿಯ ಕಾಯ೯ತಂತ್ರ ಭಾರತೀಯರ ಮೆಚ್ಚುಗೆ ಗಳಿಸಿದೆ ಎಂದರು. ಕನಾ೯ಟಕದ ಉಪಚುನಾವಣೆಯ ಸಂದಭ೯ ಮತದಾನಕ್ಕೆ ಎರಡು ದಿನಗಳಿರುವಾಗ ಕಾಂಗ್ರೆಸ್ ಪಕ್ಷ ,ಹಣ, ಹೆಂಡವನ್ನು ಹಂಚುವ ಮೂಲಕ ಕರಾಳರಾತ್ರಿಯ ನೆನಪನ್ನು ತಂದು ಕುಟಿಲ ತಂತ್ರದಿಂದ ಚುನಾವಣೆಯನ್ನು ಗೆದ್ದಿದೆ ಎಂದು ಬೊಮ್ಮಾಯಿ ಪ್ರತಿಕ್ರಿಯಿಸಿದರು.